IMG_20250912_231526.jpg
Spread the love

ಬ್ರಹ್ಮಾವರ: ದಿನಾಂಕ:12-09-2025(ಹಾಯ್ ಉಡುಪಿ ನ್ಯೂಸ್) ಯುವಕನೋರ್ವ ತನ್ನನ್ನು ಮದುವೆಯಾಗಲು ಒಪ್ಪದ ಯುವತಿಯನ್ನು ಚೂರಿಯಿಂದ ಇರಿದು ಕೊಂದ ಘಟನೆ ಪೆಜಮಂಗೂರು ಗ್ರಾಮದ ಪುತ್ತನ ಕಟ್ಟೆ ಎಂಬಲ್ಲಿ ನಡೆದಿದೆ.

ಬ್ರಹ್ಮಾವರ ಠಾಣಾ ಸರಹದ್ದಿನ ಪೆಜಮಂಗೂರು ಗ್ರಾಮದ ಕೊಕ್ಕರ್ಣೆಯ ಚಗುರಿಬೆಟ್ಟು ನಿವಾಸಿಯಾದ  ರಮೇಶ್‌ ಪೂಜಾರಿ, (55)  ಇವರ ಚಿಕ್ಕಮ್ಮನ ಮಗಳಾದ ರಕ್ಷಿತಾ (23) ಎಂಬವಳನ್ನು ಅವಳ ಊರಿನ ನಿವಾಸಿ ಹಾಗೂ ದೂರದ ಸಂಬಂಧಿಯಾದ ಆರೋಪಿತ ಕಾರ್ತಿಕ್‌ ನು ರಕ್ಷಿತಾಳನ್ನು ಕೊಲೆ ಮಾಡುವ ಉದ್ದೇಶದಿಂದ ದಿನಾಂಕ 12-09-2025 ರಂದು ಬೆಳಿಗ್ಗೆ 08:45 ಗಂಟೆಗೆ ಪೆಜಮಂಗೂರು ಗ್ರಾಮದ ಪುತ್ತನಕಟ್ಟೆ ಬಳಿ ಇರುವ ಸಾಸ್ತಾವು ರಸ್ತೆಯಲ್ಲಿ ಮನೆಯಿಂದ ರಕ್ಷಿತಾಳು ಕೆಲಸಕ್ಕೆಂದು ತನ್ನ ತಂಗಿ ಶ್ರಾವಣಿಯ ಜೊತೆ ನಡೆದುಕೊಂಡು ಬರುತ್ತಿದ್ದ ಸಮಯ ಸ್ಥಳಕ್ಕೆ ಆರೋಪಿ ಕಾರ್ತಿಕ ನು KA-20-EA-5525 ನೇ ನಂಬ್ರದ ಮೋಟಾರ್‌ ಸೈಕಲನ್ನು ಸವಾರಿ ಮಾಡಿಕೊಂಡು ಬಂದು ಆತನ ಕೈಯಲ್ಲಿದ್ದ ಚೂರಿಯಿಂದ ರಕ್ಷಿತಾಳ ಹೊಟ್ಟೆಗೆ ಇರಿದು, ಕುತ್ತಿಗೆಗೆ ಕೊಯ್ದು, ಹಾಗೂ ರಕ್ಷಿತಾಳ ತಂಗಿ ಶ್ರಾವಣಿಗೆ ಹೊಡೆದು,  ಸ್ಥಳದಿಂದ ಆಕೆಗೆ ಹೋಗುವಂತೆ, ಹೋಗದೇ ಇದ್ದಲ್ಲಿ ಅವಳನ್ನು ಸಹ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ನಂತರ ತನ್ನ ಮೋಟಾರ್‌ ಸೈಕಲ್‌ ಅನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ.

ಈ ಕೃತ್ಯದಿಂದ ರಕ್ಷಿತಾಳು ತೀವೃಗಾಯಗೊಂಡು ರಕ್ತಸ್ರಾವವಾಗಿ ಪ್ರಜ್ಞೆ ಕಳೆದುಕೊಂಡಿದ್ದು ಅವಳನ್ನು ಚಿಕಿತ್ಸೆ ಬಗ್ಗೆ ಮಣಿಪಾಲದ ಕೆ.ಎಮ್‌.ಸಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಕಲಂ 109(1), 115(2),351(2)ಬಿ ಎನ್‌ ಎಸ್ ರಂತೆ ಪ್ರಕರಣ ದಾಖಲಾಗಿದೆ.

error: No Copying!