images.jpeg
Spread the love

ಉಡುಪಿ: ದಿನಾಂಕ:12-09-2025(ಹಾಯ್ ಉಡುಪಿ ನ್ಯೂಸ್) ಟ್ರೇಡಿಂಗ್ ಲಿಂಕ್ ಗೆ ಸೇರಿ ಕೊಂಡ ಅಂಬಲಪಾಡಿಯ ನಿವಾಸಿ ಯೋರ್ವರಿಗೆ ಐವತ್ತು ಲಕ್ಷ ರೂಪಾಯಿ ವಂಚನೆ ನಡೆಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಅಂಬಲಪಾಡಿ ನಿವಾಸಿ ರಾಜಶೇಖರ್‌,(62) ಎಂಬವರು ICICI securities Inst stock ಟ್ರೇಡಿಂಗ್‌ ಲಿಂಕ್‌ಗೆ ಸೇರಿಕೊಂಡಿದ್ದು, ಆಗ ರಾಜಶೇಖರ್ ರವರನ್ನು ಯಾರೋ ICICI Exchange study group ಎಂಬ ವಾಟ್ಸಾಫ್‌ ಗ್ರೂಫ್‌ಗೆ ಸೇರಿಸಿರುತ್ತಾರೆ ಎಂದಿದ್ದಾರೆ.

ಗ್ರೂಪ್‌ನ ಅಡ್ಮಿನ್‌ ICICI Securities trading ವೆಬ್‌/ಆ್ಯಪ್‌ ನ್ನು ತೆರೆಯಲು ಲಿಂಕ್‌ ಒದಗಿಸಿದ್ದು, ರಾಜಶೇಖರ್ ರವರು ICICI Securities trading ನಲ್ಲಿ ಜುಲೈ 16 ರಿಂದ ಅಗಸ್ಟ್‌ 13 ರ ವರೆಗೆ ಹಂತ ಹಂತವಾಗಿ ಸುಮಾರು 52,70,955/- ರೂಪಾಯಿ ಹಣವನ್ನು ಹೂಡಿಕೆ ಮಾಡಿದ್ದು, ಇದರಲ್ಲಿ 2,47,900/- ರೂಪಾಯಿ ಹಣವನ್ನು ವಾಪಾಸು ಪಡೆದಿರುತ್ತಾರೆ. ರಾಜಶೇಖರ್ ರವರು ಉಳಿದ 50,23,055/- ರೂಪಾಯಿ ಹಣವನ್ನು ಹಿಂಪಡೆಯಲು ಪ್ರಯತ್ನಿಸಿದಾಗ ಹಣವನ್ನು ಹಿಂಪಡೆಯಲು ಆಗದೇ ಇದ್ದು, ಆರೋಪಿತರು ರಾಜಶೇಖರ್ ರವರು ಈ ವರೆಗೆ ಹೂಡಿಕೆ ಮಾಡಿದ 50,23,055/- ಹಣವನ್ನಾಗಲೀ ಅಥವಾ ಲಾಭಾಂಶವನ್ನಾಗಲೀ ವಾಪಾಸು ನೀಡದೇ ರಾಜಶೇಖರ್ ರವರಿಗೆ ಮೋಸದಿಂದ ನಷ್ಟ ಉಂಟು ಮಾಡಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ  ಕಲಂ: 66 (C), 66(D) IT Act. ಮತ್ತು ಕಲಂ 318(4) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!