Spread the love
  • ಕುಂದಾಪುರ: ದಿನಾಂಕ 08/09/2025 (ಹಾಯ್ ಉಡುಪಿ ನ್ಯೂಸ್) ಪಂಚಗಂಗಾವಳಿ ಹೊಳೆಯ ಬದಿಯಲ್ಲಿ  ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದಲ್ಲಿಗೆ ಕುಂದಾಪುರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ನಂಜಾನಾಯ್ಕ ಅವರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ್ದಾರೆ
  • ಕುಂದಾಪುರ ಪೊಲೀಸ್‌ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ (ಕಾ ಮತ್ತು ಸು) ನಂಜಾನಾಯ್ಕ ಇವರಿಗೆ ದಿನಾಂಕ:07-09-2025 ರಂದು ರೌಂಡ್ಸ್‌ ನಲ್ಲಿರುವಾಗ ಕುಂದಾಪುರ ಕಸಬಾ ಗ್ರಾಮದ ಫೆರಿರಸ್ತೆಯ ಪಂಚಗಂಗಾವಳಿ ಹೊಳೆಯ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಎಂಬ ಜುಗಾರಿ ಆಟ ಆಡುತ್ತಿದ್ದಾರೆಂದು ದೊರೆತ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿದ್ದಾರೆ .
  • ದಾಳಿ ಮಾಡಲು ಹೋದಾಗ ಅವರುಗಳು ಓಡಿ ಹೋಗಲು ಪ್ರಯತ್ನಿಸಿದ್ದು ಅವರುಗಳಲ್ಲಿ 1) ಅಣ್ಣಯ್ಯ (62), 2) ಸುರೇಶ (71), 3)ದಯಾನಂದ (55), 4) ಉಬೇದುಲ್ಲಾ (50) ಇವರನ್ನು ಸಿಬ್ಬಂದಿಯವರ ಸಹಾಯದಿಂದ ಬಂಧಿಸಿ ವಶಕ್ಕೆ ಪಡೆಡುಕೊಂಡು, ಸ್ಥಳದಲ್ಲಿ ಅಂದರ್‌ ಬಾಹರ್‌ ಜುಗಾರಿ ಆಟಕ್ಕೆ ಉಪಯೋಗಿಸಿದ 1) ಇಸ್ಪೀಟ್‌ ಎಲೆಗಳು, 2) ನಗದು ರೂಪಾಯಿ 3150/-, 3) ಮೊಬೈಲ್‌ ಪೋನ್‌ ಗಳು -4 , 4) ನೆಲಕ್ಕೆ ಹಾಸಿದ ಹಳೆಯ ಖಾಲಿ ಸಿಮೆಂಟ್‌ ಚೀಲ -1, ಹಾಗೂ ಸ್ಥಳದಲ್ಲಿ ಆಪಾದಿತನಾದ ಉಬೇದುಲ್ಲಾ ಎಂಬಾತನ ಡಿಸ್ಕವರಿ ಮೋಟಾರು ಸೈಕಲ್‌ ನಂಬ್ರ KA-19-EL-9212 , ಆಪಾದಿತನಾದ ದಯಾನಂದ ಎಂಬಾತನ HONDA SHINE ಮೋಟಾರು ಸೈಕಲ್‌ ನಂಬ್ರ KA-20-HE-3846 ಸ್ವಾಧೀನಪಡಿಸಿಕೊಂಡಿದ್ದಾರೆ.
  • ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ  ಕಲಂ: 87 KP ACT ರಂತೆ ಪ್ರಕರಣ ದಾಖಲಾಗಿದೆ.

error: No Copying!