ಕಾರ್ಕಳ: ದಿನಾಂಕ :08-09-2025(ಹಾಯ್ ಉಡುಪಿ ನ್ಯೂಸ್) ಸೋಮೇಶ್ವರ ನಿವಾಸಿ ಶೇಖರ ಎಂಬವರನ್ನು ಕೊಲೆ ಮಾಡುವ ಉದ್ದೇಶದಿಂದ ಮೂವರು ವ್ಯಕ್ತಿಗಳು ಮಾರಕ ಆಯುಧದಿಂದ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಸೋಮೇಶ್ವರ ಗ್ರಾಮದ ನಿವಾಸಿ ವಿಶ್ವಾಸ್ (32) ಮಂಗಳೂರು ಇವರ ಪತ್ನಿ ಸಮೀಕ್ಷಾ ರವರ ತಂದೆ ಶೇಖರ ಎಂಬವರು ದಿನಾಂಕ:06-09-2025 ರಂದು ರಾತ್ರಿ ತಮ್ಮ ಮನೆಯಲ್ಲಿ ಹೊರಗಡೆ ದನಕ್ಕೆ ಹುಲ್ಲು ಹಾಕಲು ಹೋದ ಸಮಯ ಯಾರೋ ಮೂರು ಜನ ಅಪರಿಚಿತರು ಕತ್ತಲೆಯಲ್ಲಿ ವಿಶ್ವಾಸ್ ರವರ ಮಾವನನ್ನು ಕೊಲ್ಲುವ ಉದ್ದೇಶದಿಂದ ಅವರ ಬಲ ಕಿವಿಯ ಹಿಂಬದಿ, ಬೆನ್ನಿನ ಬಲ ಬದಿ, ಬಲ ತೋಳು ಮತ್ತು ಕೋಲು ಕೈಗೆ, ಎಡ ಕೈಯ ಹಸ್ತಕ್ಕೆ ಯಾವುದೋ ಆಯುಧದಿಂದ ಕಡಿದು ಗಾಯಗೊಳಿಸಿದ್ದು, ಗಾಯಾಳು ಪ್ರಸ್ತುತ ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ದೂರನ್ನು ನೀಡಿದ್ದಾರೆ .
ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 109 BNS ರಂತೆ ಪ್ರಕರಣ ದಾಖಲಾಗಿದೆ.
