ದಿನಾಂಕ: 06.09.2025 (ಹಾಯ್ ಉಡುಪಿ ನ್ಯೂಸ್) ನೀಲಾವರ ಗ್ರಾಮದ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಮನೆಯೊಂದರಲ್ಲಿ ನಡೆಯುತ್ತಿದ್ದ ಇಸ್ಪೀಟ್ ಜುಗಾರಿ ಅಡ್ಡೆಗೆ ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಅಶೋಕ ಮಾಳಬಾಗಿ ಅವರು ದಾಳಿ ನಡೆಸಿ ಹನ್ನೊಂದು ಜನರನ್ನು ಬಂಧಿಸಿದ್ದಾರೆ.
ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಅಶೋಕ್ ಮಾಳಬಗಿ ಅವರಿಗೆ ದಿನಾಂಕ:05-09-2025ರಂದು ನೀಲಾವರ ಗ್ರಾಮದ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿರುವ ಮನೆಯಲ್ಲಿ ಹಣವನ್ನು ಪಣವನ್ನಾಗಿಟ್ಟು ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದಾರೆ ಎಂಬುದಾಗಿ ಬಂದ ಖಚಿತ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ ರಾತ್ರಿ ದಾಳಿ ನಡೆಸಿದ್ದಾರೆ .
ದಾಳಿ ನಡೆಸಿದಾಗ ಸ್ಥಳದಲ್ಲಿ ಆರೋಪಿತರಾದ 1) ಸದಾಶಿವ ದೇವಾಡಿಗ(48), ನೀಲಾವರ ಗ್ರಾಮ, ಬ್ರಹ್ಮಾವರ, 2) ಪ್ರಸನ್ನ(43), 52 ಹೇರೂರು ಗ್ರಾಮ, ಬ್ರಹ್ಮಾವರ, 3) ರಜಾಕ್(55), 52 ಹೇರೂರು ಗ್ರಾಮ, ಬ್ರಹ್ಮಾವರ, 4) ಭಾಸ್ಕರ(48), ಕನ್ನಾರು ಪೇತ್ರಿ ಅಂಚೆ, ಚೇರ್ಕಾಡಿ ಗ್ರಾಮ, ಬ್ರಹ್ಮಾವರ, 5) ಅಶೋಕ(47), ಉದ್ದಿನಹಿತ್ಲು ಕೊಡವೂರು ಗ್ರಾಮ, ಉಡುಪಿ, 6) ಹರೀಶ್ ನಾಯ್ಕ(35), ತೆಂಕನಿಡಿಯೂರು ಗ್ರಾಮ, ಉಡುಪಿ, 7) ಚಂದ್ರಹಾಸ(40), ಹನಮಂತ ನಗರ, ಪುತ್ತೂರು ಗ್ರಾಮ, ಉಡುಪಿ, 8) ರವಿಕುಮಾರ(57), ಬೇಳೂರು ಗ್ರಾಮ, ಕುಂದಾಪುರ, 9) ಶಶಿಕಾಂತ(36), ಪೇತ್ರಿ ಅಂಚೆ, ಚೇರ್ಕಾಡಿ ಗ್ರಾಮ, ಬ್ರಹ್ಮಾವರ, 10) ಆನಂದ ಕೋಟ್ಯಾನ(63), ಕುಕ್ಕುಂಜೆ, ಸಂತೆಕಟ್ಟೆ ಅಂಚೆ, ಶಿವಳ್ಳಿ ಗ್ರಾಮ, ಉಡುಪಿ, 11) ಸಂಪತ್(37), ಚೇರ್ಕಾಡಿ ಗ್ರಾಮ, ಬ್ರಹ್ಮಾವರ ಎಂಬವರನ್ನು ಬಂಧಿಸಿ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ ಆರೋಪಿಗಳು ಹಣವನ್ನು ಪಣವನ್ನಾಗಿ ಇಟ್ಟುಕೊಂಡು ಅಂದರ್ ಬಾಹರ್ ಇಸ್ಫಿಟ್ ಜುಗಾರಿ ಆಡುತ್ತಿರುವ ಬಗ್ಗೆ ತಮ್ಮ ತಪ್ಪನ್ನು ಒಪ್ಪಿಕೊಂಡಿರುತ್ತಾರೆ.
ಆರೋಪಿಗಳಿಂದ ಅಂದರ್-ಬಾಹರ್ ಆಟಕ್ಕೆ ಬಳಸಿದ ತಲಾ ಒಟ್ಟು ನಗದು ರೂ. 20,900/-, ಇಸ್ಪೀಟು ಎಲೆಗಳು-52, ಫೈಬರ್ ರೌಂಡ್ ಟೇಬಲ್-1, ಪ್ಲಾಸ್ಟಿಕ್ ಕುರ್ಚಿಗಳು-12, ಮೊಬೈಲ್ ಪೋನ್ ಗಳು -11, KA.20.MF.1935, KA.20.MB.9472, KA.20.MC.3193 ನಂಬ್ರದ ಕಾರುಗಳು ಮತ್ತು KA.19.EY.4494, KA.20.EW.8576, KA.20.EH.3766, KA.20.EL.8315, ನಂಬ್ರದ ದ್ವಿಚಕ್ರ ವಾಹನಗಳನ್ನು ಸ್ವಾಧೀನಕ್ಕೆ ಪಡೆದು ಕೊಂಡಿದ್ದಾರೆ .
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಕಲಂ. 79, 80 KP Actರಂತೆ ಪ್ರಕರಣ ದಾಖಲಾಗಿದೆ..
