ಕುಂದಾಪುರ: ದಿನಾಂಕ 06/09/2025 (ಹಾಯ್ ಉಡುಪಿ ನ್ಯೂಸ್) ಕರ್ಕುಂಜೆ ಗ್ರಾಮದ ಮುಕ್ಕೋಡು ನ ಕ್ಯಾಟರಿಂಗ್ ಶೆಡ್ ಒಂದರಲ್ಲಿ ನಡೆಯುತ್ತಿದ್ದ ಅಂದರ್ ಬಾಹರ್ ಜುಗಾರಿ ಅಡ್ಡೆಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಭೀಮಾಶಂಕರ ಸಿನ್ನೂರ ಸಂಗಣ್ಣ ಅವರು ದಾಳಿ ನಡೆಸಿ ಹನ್ನೊಂದು ಜನರನ್ನು ಬಂಧಿಸಿದ್ದಾರೆ.
ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕರಾದ ಭೀಮಾ ಶಂಕರ ಸಿನ್ನೂರ ಸಂಗಣ್ಣ ಅವರು ದಿನಾಂಕ:05-09-2025 ರಂದು ರೌಂಡ್ಸ್ ಕರ್ತವ್ಯದಲ್ಲಿರುವಾಗ ಕುಂದಾಪುರ ತಾಲೂಕು ಕರ್ಕುಂಜೆ ಗ್ರಾಮದ ಮುಕ್ಕೋಡು ರಾಜೀವ ಎಂಬಾತನ ಕ್ಯಾಟರಿಂಗ್ ಶೆಡ್ ನಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದಾರೆಂದು ಸಾರ್ವಜನಿಕರಿಂದ ಮಾಹಿತಿ ದೊರೆತಿದ್ದು ಕೂಡಲೇ ಸ್ಥಳಕ್ಕೆ ದಾಳಿ ನಡೆಸಿದ್ದಾರೆ .
ದಾಳಿ ನಡೆಸಿದಾಗ ಸ್ಥಳದಲ್ಲಿ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ 1) ಚಂದ್ರಶೇಖರ, 2) ಅಭಿಜಿತ್, 3) ಸತೀಶ್ , 4) ಗಣಪತಿ , 5) ಈಶ್ವರ , 6) ಸುಬ್ಬಣ್ಣ, 7) ಭಾಸ್ಕರ , 8) ಮಂಜುನಾಥ, 9) ಸುರೇಶ , 10) ವಿಜಯ, 11) ನಿತೇಶ್ ಎಂಬವರನ್ನು ಬಂಧಿಸಿ ವಶಕ್ಕೆ ಪಡೆದು ಇಸ್ಪೀಟ್ ಜುಗಾರಿ ಆಟಕ್ಕೆ ಬಳಸಿದ ಒಟ್ಟು 1,10,790/- ರೂಪಾಯಿ, ಇಸ್ಪೀಟ್ ಎಲೆಗಳು, ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ ರೌಂಡ್ ಟೇಬಲ್-2, ಪ್ಲಾಸ್ಟಿಕ್ ಕುರ್ಚಿ-07, ಕಬ್ಬಿಣದ ಕುರ್ಚಿ-10, ಆಪಾದಿತರು ಇಸ್ಪೀಟ್ ಜುಗಾರಿ ಆಟಕ್ಕೆ ಬಳಸಿದ ಮೊಬೈಲ್-12, ಆಪಾದಿತರು ಇಸ್ಪೀಟ್ ಜುಗಾರಿ ಆಟ ಆಡಲು ಬಂದಿದ್ದ ವಾಹನಗಳಾದ KA-20-EP-6665 ನೇ ಸ್ಕೂಟರ್, KA-47-A-5600 Ertiga ಕಾರು, KA-20-MD-8270 Kia selto ಕಾರು, KA-20-MD-1580 Kia selto ಕಾರು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 79, 80 KP Act ರಂತೆ ಪ್ರಕರಣ ದಾಖಲಾಗಿದೆ.
