IMG_20250905_234620.jpg
Spread the love

ಕೋಟ: ದಿನಾಂಕ:05-09-2025(ಹಾಯ್ ಉಡುಪಿ ನ್ಯೂಸ್) ಬಸ್ರೂರಿನ ಶ್ರೀ ಶಾರದಾ ಇಂಗ್ಲಿಷ್ ಮೀಡಿಯಂ ಸ್ಕೂಲ್ ನವರು ಶಾಲಾ ವಾಹನಕ್ಕೆ ನಕಲಿ ಇನ್ಶೂರೆನ್ಸ್ ಪಾಲಿಸಿಯನ್ನು ಸ್ರಷ್ಟಿಸಿ ಇನ್ಶೂರೆನ್ಸ್ ಕಂಪೆನಿಗೆ ಮೋಸ ಮಾಡಿದ್ದಾರೆ ಎಂದು ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಿಖಿಲ್‌ ಜಿ ಆರ್(29) ಎಂಬವರು ಬೆಂಗಳೂರು ರಿಲಯನ್ಸ್‌ ಜನರಲ್‌ ಇನ್ಯೂರೆನ್ಸ್‌ ಕಂಪೆನಿಯಲ್ಲಿ ಮೇನೇಜರ್‌ ಆಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 25/11/2024 ರಂದು ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಹೊಂಬಾಡಿ – ಮಂಡಾಡಿ ಗ್ರಾಮದ ಹುಣ್ಸೆಮಕ್ಕಿ ಎಂಬಲ್ಲಿ KA-20-AB-8968 ಶಾಲಾ ವಾಹನ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಕೋಟ ಪೊಲೀಸ್‌ ಠಾಣೆಯಲ್ಲಿ 236/2024 ಕಲಂ: 281, 125(ಬಿ) ಬಿಎನ್‌ಎಸ್‌ ರಂತೆ ಪ್ರಕರಣ ದಾಖಲಾಗಿ ತನಿಖೆ ನಡೆದು ಮಾನ್ಯ ಎ.ಸಿ.ಜೆ (ಜ್ಯೂ ಡಿ) ಮತ್ತು ಜೆಎಮ್‌ ಎಫ್‌ ಸಿ ನ್ಯಾಯಾಲಯಕ್ಕೆ ಆರೋಪಣಾ ಪತ್ರವನ್ನು ಸಲ್ಲಿಸಿದ್ದು ವಿಚಾರಣೆ ನಡೆದಿರುತ್ತದೆ.

ಅಲ್ಲದೇ ಪ್ರಕರಣದ MVC ಪ್ರಕರಣವು  ಕುಂದಾಪುರ ಸೆಷನ್ಸ್‌ ನ್ಯಾಯಾಲಯದ MVC ನಂ 355/2025 ರಂತೆ ವಿಚಾರಣೆಯಲ್ಲಿದ್ದು KA-20-AB-8968 ರಿಕ್ಷಾದ ಚಾಲಕರಾದ ಉದಯ ರವರು ವಿಮಾ ಪರಿಹಾರವಾಗಿ ರೂಪಾಯಿ 15,95,000/- ಕೋರಿಕೊಂಡಿರುತ್ತಾರೆ . ಪ್ರಕರಣವನ್ನು ವಿಮಾ ಕಂಪೆನಿಯವರು ಪರಿಶೀಲಿಸಿದಾಗ ಶಾಲಾ ಬಸ್ಸು KA-20-AB-8968 ರ ವಿಮಾ ಪಾಲಿಸಿಯು ನಕಲಿ ವಿಮಾ ಪಾಲಿಸಿಯಾಗಿರುವುದು ಕಂಡುಬಂದಿರುತ್ತದೆ.

ಆರೋಪಿ ಮಾಲಕರು ಶ್ರೀ ಶಾರದ ಇಂಗ್ಲೀಷ್‌ ಮೀಡಿಯಂ ಸ್ಕೂಲ್‌ ಬಸ್ರೂರು ಇವರು ನಕಲಿ ವಿಮಾ ಪಾಲಿಸಿಯನ್ನು ಸೃಷ್ಟಿಸಿ ಠಾಣೆಗೆ ಹಾಗೂ  ನ್ಯಾಯಾಲಯಕ್ಕೆ ಹಾಜರುಪಡಿಸಿ ಈ ಮೂಲಕ ವಿಮಾ ಕಂಪೆನಿಗೆ ಮೋಸ ಮಾಡಿದ್ದಾರೆ ಎಂದು ಇನ್ಸೂರೆನ್ಸ್ ಕಂಪನಿಯ ಪರವಾಗಿ ನಿಖಿಲ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಇನ್ಸೂರೆನ್ಸ್ ಕಂಪನಿಯವರು ನೀಡಿದ ದೂರಿನಂತೆ ಕೋಟ ಪೊಲೀಸ್‌ ಠಾಣೆಯಲ್ಲಿ ಕಲಂ:318(4̧), 336(2), 340(2), 336(4) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!