IMG_20250904_084614.jpg
Spread the love

ಕುಂದಾಪುರ: ದಿನಾಂಕ :04-09-2025(ಹಾಯ್ ಉಡುಪಿ ನ್ಯೂಸ್) ಓರ್ವ ಮಹಿಳೆ ಹಾಗೂ ಆರು ಜನ ಯುವಕರ ಗುಂಪು ಒಂದು ಕಾಸರಗೋಡಿನ ಯುವಕನೋರ್ವನನ್ನು ಯಾವುದೋ ಆಮಿಷ ಒಡ್ಡಿ ಕುಂದಾಪುರಕ್ಕೆ ಕರೆಸಿ ಆತನನ್ನು ಬೆದರಿಸಿ ಲೂಟಿ ಮಾಡಿದ್ದಾರೆ ಎಂದು ಯುವಕ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ಕಾಸರಗೋಡು ಜಿಲ್ಲೆ, ಬದಿಯಡ್ಕ ಗ್ರಾಮ ಪೆರಡಾಲಾ ನಿವಾಸಿ ಸಂದೀಪ್ ಕುಮಾರ್ (37) ಎಂಬುವರಿಗೆ ಸುಮಾರು 3 ತಿಂಗಳ ಹಿಂದೆ ಕುಂದಾಪುರಕ್ಕೆ ಬಂದಾಗ ಆರೋಪಿ ಅಬ್ದುಲ್‌ ಸವಾದ್‌ ಎಂಬವರ ಪರಿಚಯವಾಗಿದ್ದು ಆತನ ಮೊಬೈಲ್ ಗೆ ಕರೆ ಮಾಡಿ ಮಾತನಾಡುತ್ತಿದ್ದು ಅಲ್ಲದೇ ಆತನ ಸ್ನೇಹಿತರಾದ ಉಳಿದ ಆರೋಪಿತರುಗಳ ಕೂಡ ಪರಿಚಯವಿರುತ್ತದೆ ಎಂದಿದ್ದಾರೆ.

ಆರೋಪಿ ಸವದ್‌ ಯಾನೆ ಅಚ್ಚು ಪ್ರಾಯ 28 ವರ್ಷ ,ವಾಸ:  ಕಟ್ಟೆಬಾಗಿಲು ಬಡಾಕೆರೆ ಪಡುಮುಂದೆ ಬಡಾಕೆರೆ ಅಂಚೆ ನಾವುಂದ ಗ್ರಾಮ ಬೈಂದೂರು ತಾಲೂಕು ಉಡುಪಿ ಈತನು ಅರೋಪಿ ಆಸ್ಮಾ ಪ್ರಾಯ 43 ವರ್ಷ ಗಂಡ: ಅಬೂಬಕ್ಕರ್‌ ವಾಸ: T-17 ಮಿಸ್ಪಾ ಮಂಜಿಲ್‌, ಎಂ ಕೋಡಿ, ಕುಂದಾಪುರ ತಾಲೂಕು ಮತ್ತು ಉಡುಪಿ ಜಿಲ್ಲೆ ಹಾಲಿ ವಾಸ: ರಾಯಲ್‌ ಎನ್‌ ಪೀಲ್ಡರೂಂ ಹಿಂದುಗಡೆ ಗೋಪಾಡಿ ಗ್ರಾಮ ಕುಂದಾಪುರ ಇವರನ್ನು ಪರಿಚಯ ಮಾಡಿಕೊಟ್ಟು ಅವರ ಮೊಬೈಲ್‌ ನಂಬ್ರ ಕೊಟ್ಟಿದ್ದು ಅವರಿಗೆ ಕರೆ ಮಾಡಿದಾಗ ಆರೋಪಿ ಆಸ್ಮಾ  ಸಂದೀಪ್ ಕುಮಾರ್ ರನ್ನು ಕುಂದಾಪುರಕ್ಕೆ ಬರಲು ತಿಳಿಸಿದಂತೆ ಸಂದೀಪ್ ಕುಮಾರ್ ಅವರು  ದಿನಾಂಕ 02-09-2025 ರಂದು ಸಂಜೆ 6:30 ಗಂಟೆಗೆ ಕುಂದಾಪುರದ ಮಲ್ನಾಡ್‌ ಪೆಟ್ರೋಲ್‌ ಬಂಕ್‌ ಬಳಿ ಇರುವ ಆರ್‌ ಆರ್‌ ಪ್ಲಾಝಾ ಬಳಿ ಆಟೋ ರಿಕ್ಷಾದಲ್ಲಿ ಬಂದಾಗ ಆರೋಪಿ ಆಸ್ಮಾ ಈಕೆಯು ಅವರ ಮನೆಗೆ ಕರೆದುಕೊಂಡು ಹೋಗಿದ್ದು ಬಳಿಕ ಆರೋಪಿತೆ ಆಸ್ಮಾ ಉಳಿದ ಆರೋಪಿತರನ್ನು ಕರೆ ಮಾಡಿ ಕರೆಯಿಸಿ ಸಂಪತ್ ಕುಮಾರ್ ರ ಬಳಿ 3 ಲಕ್ಷ ಹಣ ಕೊಟ್ಟು ಹೋಗಬೇಕು ಎಂದು ಆರೋಪಿತ ಮೊಹಮ್ಮದ್‌ ನಾಸೀರ್‌ ಶರೀಫ್‌ ಪ್ರಾಯ 36 ವರ್ಷ ವಾಸ: ಜೂಲಿಯೋ ರೆಸಿಡೆನ್ಸಿ, ರೂಮ್‌ ನಂಬ್ರ 108, ಹಂಗಳೂರು ಗ್ರಾಮ ಕುಂದಾಪುರ ,ಈತನು ಚಾಕು ತೋರಿಸಿ ಹಣ ಕೊಡುವಂತೆ ಹೆದರಿಸಿರುತ್ತಾರನೆ ಎಂದಿದ್ದಾರೆ.ಆ ಸಮಯದಲ್ಲಿ ಸಂಪತ್ ಕುಮಾರ್ ರು ಹೆದರಿ ಓಡಿ ಹೋಗಲು ಪ್ರಯತ್ನಿಸಿದಾಗ ಆರೋಪಿತರಾದ ಸವದ್‌ ಯಾನೆ ಅಚ್ಚು, ಸೈಪುಲ್ಲಾ, ಮೊಹಮ್ಮದ್‌ ನಾಸೀರ್‌ ಶರೀಫ್‌ , ಅಬ್ದುಲ್‌ ಸತ್ತಾರ್‌ ಮತ್ತು ಅಬ್ದುಲ್‌ ಅಜೀಜ್‌ ಇವರುಗಳು ಸೇರಿ ಕೈಗಳಿಗೆ ನೈಲಾನ್‌ ಹಗ್ಗದಿಂದ ಕಟ್ಟಿ ಕೈಯಿಂದ ಹಲ್ಲೆ ಮಾಡಿದ್ದು ಆರೋಪಿ ಸೈಪುಲ್ಲಾ ಈತನು ಸಂಪತ್ ಕುಮಾರ್ ರಿಗೆ ರಾಡ್‌ ನಿಂದ ಎಡ ಭುಜ ಹಾಗೂ ಬೆನ್ನಿಗೆ ಹೊಡೆದು ಬಳಿಕ ಸಂಪತ್ ಕುಮಾರ್ ರ ಪ್ಯಾಂಟ್‌ ಜೇಬಿನಲ್ಲಿದ್ದ 6,200 ರೂಪಾಯಿಯನ್ನು ಆರೋಪಿ ಸೈಪುಲ್ಲಾ ಮತ್ತು ಆಸ್ಮಾ ಇವರು ಸೇರಿ ಬಲವಂತದಿಂದ ಕಸಿದುಕೊಂಡಿರುತ್ತಾರೆ ಎಂದಿದ್ದಾರೆ.

ನಂತರ ಆಸ್ಮಾ ಳು ಸಂಪತ್ ಕುಮಾರ್ ರಿಗೆ ಗೂಗಲ್‌ ಪೇ ಮೂಲಕ ಹಣ ಹಾಕಲು ಒತ್ತಾಯಿಸಿದಾಗ ಸಂಪತ್ ಕುಮಾರ್ ಅವರ ಎಸ್‌.ಬಿ.ಐ ಬ್ಯಾಂಕ್‌ ಖಾತೆಯ ಗೂಗಲ್‌ ಪೇ ಮೂಲಕ ಆರೋಪಿ ಸೈಪುಲ್ಲಾ ಈತನ ಮೊಬೈಲ್‌ ಸಂಖ್ಯೆಗೆ 5.000/- ಹಣವನ್ನು ವರ್ಗಾವಣೆ ಮಾಡಿರುತ್ತಾರೆ. ಬಳಿಕ ಆರೋಪಿತರು ಇನ್ನೂ ಹಣವನ್ನು ಹಾಕುವಂತೆ ಸಂಪತ್ ಕುಮಾರ್ ರಿಗೆ ಹೇಳಿದಾಗ ಸಂಪತ್ ಕುಮಾರ್ ರು ಹಣ ಇಲ್ಲ ಎಂದು ಹೇಳಿದ್ದಕ್ಕೆ ಆರೋಪಿತರೆಲ್ಲರು ನಿನ್ನನ್ನು ಇಲ್ಲಿಯೇ ಕೊಲೆ ಮಾಡಿ ಹುಗಿದು ಹಾಕುತ್ತೇವೆಂದು” ಬೆದರಿಸಿ ಪುನಃ ಕೈಯಿಂದ ಹೊಡೆದಿರುತ್ತಾರೆ. ಇದಕ್ಕೆ ಹೆದರಿದ ಸಂಪತ್ ಕುಮಾರ್ ರು ಸೈಪುಲ್ಲಾ ಎಂಬವರ ಮೊಬೈಲ್‌ ನಂಬರ್‌ ಕ್ಕೆ ಒಮ್ಮೆ 10.000/- ಮತ್ತು 20.000/- ರೂಪಾಯಿ ವರ್ಗಾವಣೆ ಮಾಡಿರುತ್ತಾರೆ. ನಂತರ ಪುನಃ ಬಲತ್ಕಾರವಾಗಿ ಎಟಿಎಂ ಕಾರ್ಡ್‌ ನ್ನು ಕಿತ್ತುಕೊಂಡು ಪಿನ್‌ ನಂಬ್ರ ಪಡೆದುಕೊಂಡು ಆರೋಪಿ ಆಸ್ಮಾ ಇವಳ ಮನೆಯ ರೂಮಿನಲ್ಲಿ ಕೂಡಿಹಾಕಿ ಆರೋಪಿ ಸೈಪುಲ್ಲಾ, ಮೊಹಮ್ಮದ್‌ ನಾಸೀರ್‌ ಶರೀಫ್‌ ಮತ್ತು ಅಬ್ದುಲ್‌ ಸತ್ತಾರ್‌ ಅಲ್ಲಿಯೇ ಇದ್ದು, ಸಂಪತ್ ಕುಮಾರ್ ರ ಎಸ್ ಬಿ ಐ ಖಾತೆಯಿಂದ 40000/- ಹಣ ಡ್ರಾ ಮಾಡಿಕೊಂಡು ATM ಕಾರ್ಡ್‌ ಮತ್ತು ಹಣವನ್ನು ಇಟ್ಟುಕೊಂಡಿರುತ್ತಾರೆ. ಸಂಪತ್ ಕುಮಾರ್ ರನ್ನು ರಾತ್ರಿ ಸುಮಾರು 11:30 ಗಂಟೆಗೆ ಹೋಗು ಎಂದು ಹೇಳಿ ಬೆದರಿಸಿ ಕಳುಹಿಸಿರುತ್ತಾರೆ ಎಂದು ಸಂಪತ್ ಕುಮಾರ್ ಪೊಲೀಸರಿಗೆ ದೂರು ನೀಡಿದ್ದಾರೆ .

ಈ ಬಗ್ಗೆ ಸಂದೀಪ್‌ ಕುಮಾರ ರವರು ನೀಡಿದ ದೂರಿನ ಮೇರೆಗೆ ಕುಂದಾಪುರ ಠಾಣೆಯಲ್ಲಿ  ಕಲಂ:140(2) 310(2) 115(2) 118(1) 127(2) 352 351(2) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!