stock-photo-bridge-card-game-relax-home.jpeg
Spread the love
  • ಕೋಟ: ದಿನಾಂಕ:03-09-2025(ಹಾಯ್ ಉಡುಪಿ ನ್ಯೂಸ್) ಚಿತ್ರಪಾಡಿ ಗ್ರಾಮದ ಗುರುನರಸಿಂಹ ದೇವಸ್ಥಾನದ ಬಳಿಯ ಕೆರೆ ಹತ್ತಿರ ಇಸ್ಪೀಟ್ ಜುಗಾರಿ ಆಡುತ್ತಿದ್ದ 8 ಜನರನ್ನು ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಪ್ರವೀಣ್ ಕುಮಾರ್ ಆರ್ ಅವರು ಬಂಧಿಸಿದ್ದಾರೆ.
  • ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಪ್ರವೀಣ್ ಕುಮಾರ್ ಆರ್ ಅವರಿಗೆ ದಿನಾಂಕ 02/09/2025 ರಂದು ಮಧ್ಯ ರಾತ್ರಿ 1:00 ಗಂಟೆಗೆ ಬ್ರಹ್ಮಾವರ ತಾಲೂಕು ಚಿತ್ರಪಾಡಿ ಗ್ರಾಮದ ಸಾಳಿಗ್ರಾಮ ದಲ್ಲಿರುವ ಗುರುನರಸಿಂಹ ದೇವಸ್ಥಾನದ ಬಳಿ ಇರುವ ಕೆರೆ ಹತ್ತಿರ ಇರುವ ಮನೆಯ ಬಳಿ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದಾರೆ ಎಂಬುದಾಗಿ  ಮಾಹಿತಿ ಬಂದ ಮೇರೆಗೆ ಕೂಡಲೇ ಸಿಬ್ಬಂದಿಗಳೊಂದಿಗೆ  ದಾಳಿ ನಡೆಸಿದ್ದಾರೆ .
  • ದಾಳಿ ನಡೆದ ಸ್ಥಳದಲ್ಲಿ ಇಸ್ಪೀಟು ಆಡುತ್ತಿದ್ದ 1)ಸತೀಶ, 2) ರಘು ಸಾಲಿಗ್ರಾಮ, 3) ಚೇತನ ಕಾರ್ಕಡ (34), 4) ಹರೀಶ (34), 5) ಜನಾರ್ಧನ ಬಾರ್ಕೂರು (36), 6) ಸನ್ನಿಧಾನ (27), 7.ಪ್ರಸಾದ (38), 8.ನವೀನ (48) ಎಂಬವರನ್ನು ಬಂಧಿಸಿದ್ದು ಹಾಗೂ ಇಸ್ಪೀಟು ಆಟಕ್ಕೆ ಬಳಸಿದ ಎಲೆ ಗಳನ್ನು , ನಗದು 14,130/-, ಬೆಡ್‌ ಶಿಟ್‌ -1, ಮೊಬೈಲ್‌ -7 ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
  • ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ  ಕಲಂ: 87 KP ACT ರಂತೆ ಪ್ರಕರಣ ದಾಖಲಾಗಿದೆ.
error: No Copying!