IMG_20250903_002020.jpg
Spread the love

ದಿನಾಂಕ:03-09-2025(ಹಾಯ್ ಉಡುಪಿ ನ್ಯೂಸ್)

ಧರ್ಮಸ್ಥಳ ಮತ್ತು ಸೌಜನ್ಯ ಪ್ರಕರಣದಲ್ಲಿ ಬಿಜೆಪಿ ದ್ವಿಮುಖ ನೀತಿಯನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಧರ್ಮಾಧಿಕಾರಿಯನ್ನು ಬೆಂಬಲಿಸಿ ಬಿಜೆಪಿ ಯಾತ್ರೆ ಕೈಗೊಂಡಿತ್ತು. ಮತ್ತೊಂದೆಡೆ, ಸೌಜನ್ಯ ಕುಟುಂಬದವರು ಹೊಸ ತನಿಖೆಗಾಗಿ ಸುಪ್ರೀಂ ಕೋರ್ಟ್ ಸಂಪರ್ಕಿಸಬೇಕೆಂದು ಅವರೇ ಸಲಹೆ ನೀಡುತ್ತಿದ್ದಾರೆ. ಬಿಜೆಪಿ ವೀರೇಂದ್ರ ಹೆಗ್ಗಡೆ ಅವರನ್ನು ಬೆಂಬಲಿಸುತ್ತಿದ್ದರೆ, ಸೌಜನ್ಯ ಕುಟುಂಬ ಹೊಸದಾಗಿ ತನಿಖೆ ನಡೆಸಲು ಅನುಮತಿಗಾಗಿ ಕೋರ್ಟ್ ಸಂಪರ್ಕಿಸುವಂತೆ ಅವರು ಏಕೆ ಬಯಸುತ್ತಾರೆ? ಎಂದು ಪ್ರಶ್ನಿಸಿದರು.

ಏತನ್ಮಧ್ಯೆ, ಗೃಹ ಸಚಿವ ಜಿ ಪರಮೇಶ್ವರ ಅವರು ಪ್ರಕರಣವನ್ನು ಎನ್ಐಎಗೆ ಹಸ್ತಾಂತರಿಸುವ ಅಗತ್ಯವಿಲ್ಲ. ನಾವು ವಿಶೇಷ ತನಿಖಾ ತಂಡ ರಚಿಸಿದ್ದೇವೆ. ಅದು ತನಿಖೆ ನಡೆಸುತ್ತಿದೆ ಎಂದರು. ಬಿಜೆಪಿಯ ಉದ್ದೇಶ ಏನೆಂದು ನನಗೆ ತಿಳಿದಿಲ್ಲ. ತನಿಖೆಯಲ್ಲಿ ಯಾವುದೇ ತಪ್ಪುಗಳು ಇಲ್ಲ. ತನಿಖೆಗೆ ಅಡ್ಡಿಪಡಿಸಲು ಅವರು ಬಯಸುತ್ತಿದ್ದಾರೆಯೇ? ಎಂದು ಪ್ರಶ್ನಿಸಿದರು.

error: No Copying!