ದಿನಾಂಕ:03-09-2025(ಹಾಯ್ ಉಡುಪಿ ನ್ಯೂಸ್)
ಅಕ್ರಮ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟಿ ರನ್ಯಾರಾವ್ ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ನೂರಾರು ಕೋಟಿ ರೂಪಾಯಿ ಬೆಲೆ ಬಾಳುವ ಚಿನ್ನವನ್ನು ವಿದೇಶದಿಂದ ಅಕ್ರಮವಾಗಿ ಭಾರತಕ್ಕೆ ತಂದಿರುವುದು ತನಿಖೆಯಲ್ಲಿ ದೃಢಪಟ್ಟಿದ್ದು ಈ ಹಿನ್ನೆಲೆಯಲ್ಲಿ ರನ್ಯಾ ರಾವ್ಗೆ ಕಂದಾಯ ಗುಪ್ತಚರ ನಿರ್ದೇಶನಾಲಯವು 102.55 ಕೋಟಿ ರೂ. ದಂಡ ಪಾವತಿಸುವಂತೆ ನೋಟಿಸ್ ನೀಡಿದೆ. ರನ್ಯಾ ರಾವ್ ಅವರು ಅಕ್ರಮವಾಗಿ 127.3 ಕೆಜಿ ಚಿನ್ನ ಸಾಗಾಟ ಮಾಡಿರುವುದು ತನಿಖೆಯಿಂದ ದೃಢಪಟ್ಟಿದೆ. ಹೀಗಾಗಿ ಕಳ್ಳಸಾಗಣೆ ವಸ್ತುಗಳನ್ನು 6 ತಿಂಗಳಲ್ಲಿ ಡಿಆರ್ಐ ಅಧಿಕಾರಿಗಳು ವಸೂಲಿ ಮಾಡಬೇಕಿರುವುದರಿಂದ ಭಾರೀ ಮೊತ್ತದ ದಂಡವನ್ನು ವಿಧಿಸಲಾಗಿದೆ. ಇಂದು ಜೈಲಿಗೆ ತೆರಳಿ ರನ್ಯಾ ಸೇರಿ ನಾಲ್ವರು ಆರೋಪಿಗಳಿಗೆ DRI ನೋಟಿಸ್ ನೀಡಿದೆ. ಕಾಫಿಪೋಸಾ ಅಡಿಯಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ಒಂದು ವರ್ಷದವರೆಗೂ ರನ್ಯಾ ರಾವ್ ಗೆ ಜಾಮೀನು ಸಿಗುವುದಿಲ್ಲ.
