ದಿನಾಂಕ:01-09-2025(ಹಾಯ್ ಉಡುಪಿ ನ್ಯೂಸ್)
ಧರ್ಮಸ್ಥಳ ಪ್ರಕರಣದ ಸಂಬಂಧ ವಿಶೇಷ ತನಿಖಾ ತಂಡದ ಎದುರು ಹೊಸ ಸಾಕ್ಷಿಯೊಬ್ಬರು ಸಾಕ್ಷಿ ಹೇಳಲು ಮುಂದೆ ಬಂದಿದ್ದಾರೆ. ಮಂಡ್ಯದ ಚಿಕ್ಕಕೆಂಪಮ್ಮ ಎಂಬ 62 ವರ್ಷದ ಮಹಿಳೆ ಎಸ್‌ಐಟಿಗೆ ಪತ್ರ ಬರೆದಿದ್ದು, ಕೆಲವು ಪುರುಷರು ಸೌಜನ್ಯಳನ್ನು ಎಳೆದುಕೊಂಡು ಹೋಗಿ ಕಾರಿನಲ್ಲಿ ಅಪಹರಿಸುವುದನ್ನು ನೋಡಿದ್ದೇನೆ ಎಂದು ಹೇಳಿದ್ದಾರೆ.
ಧರ್ಮಸ್ಥಳದ ಸುತ್ತಮುತ್ತ ನಡೆದಿದೆ ಎನ್ನಲಾಗುತ್ತಿರುವ ಹಲವಾರು ಅಪಹರಣ, ಅತ್ಯಾಚಾರ ಅಪಹರಣ, ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳ ಸಮಗ್ರ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚನೆ ಮಾಡಲಾಗಿದ್ದು, ಇಲ್ಲಿನ ಪ್ರಕರಣಗಳಿಗೆ ಸಂಬಂಧಪಟ್ಟಂತೆ ಸಾಕ್ಷಿಗಳು ಇದ್ದರೆ ಬಂದು ಹೇಳಿಕೆ ನೀಡಬಹುದು ಎಂದು ತಿಳಿಸಿರುವುದು ಸ್ವಾಗತಾರ್ಹ ವಿಚಾರ ಹಾಗೂ ನನಗೆ ಹೆಚ್ಚು ಧೈರ್ಯವನ್ನು ಕೊಟ್ಟಿದೆ. ಹಾಗಾಗೀ ನಾನು ಒಂದು ಸಾಕ್ಷಿಯಾಗಿ ತಮ್ಮ ಮುಂದೆ ಬರಲು ಇಚ್ಚಿಸುತ್ತೇನೆ ಎಂದು ಹೇಳಿದ್ದಾರೆ. ಚಿಕ್ಕಕೆಂಪಮ್ಮ ನೀಡಿರುವ ದೂರು ಸ್ವೀಕರಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಎಸ್‌ಐಟಿ ಇನ್ನೂ ದೃಢಪಡಿಸಿಲ್ಲ.
