- ಮಲ್ಪೆ: ದಿನಾಂಕ:31-08-2025(ಹಾಯ್ ಉಡುಪಿ ನ್ಯೂಸ್) ಬ್ಯಾಂಕ್ ಮ್ಯಾನೇಜರ್ ಓರ್ವ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್ ಗೆ 73 ಲಕ್ಷ ರೂಪಾಯಿ ವಂಚನೆ ನಡೆಸಿದ್ದಾರೆ ಎಂದು ಮಲ್ಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
- ರಾಜೇಶ್ ಗಣಪತಿ ಎಂಬವರು ಭಾರತೀಯ ಸ್ಟೇಟ್ ಬ್ಯಾಂಕಿನ ಮಲ್ಪೆ ಶಾಖೆಯ ಮ್ಯಾನೇಜರ್ ಆಗಿರುತ್ತಾರೆ ಎಂದು ಮಲ್ಪೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
- PIRAMAL Capital & Housing Finance ಎಂಬ ಹೆಸರಿನ Housing Finance ಕಂಪೆನಿಯಿಂದ ಬಂದ [email protected]s ಎಂಬ E̲Mail ಸಂದೇಶದಂತೆ SBI ಮಲ್ಪೆ ಶಾಖೆಯಿಂದ ದಿನಾಂಕ: 11/08/2025 ರಂದು ಜೆ ಸಮುದ ಸುವರ್ಣ, ನಂತೂರು ಪದವು ಕುಲಶೇಖರ ಎಂಬ ಖಾತೆದಾರರಿಗೆ ರೂ 10,00,000/- ಮತ್ತು ಶರ್ಮಿಳ ಎಸ್. ಮುಳೂರು ಉಡುಪಿ ಎಂಬ ಖಾತೆ ದಾರರಿಗೆ ರೂ 10,00,000/- , ದಿನಾಂಕ: 14/08/2025 ರಂದು ಸುಶಾಂತ್ ತಿಂಗಳಾಯ, ಕೋಡಿ ಗ್ರಾಮ ಉಡುಪಿ ಎಂಬ ಖಾತೆ ದಾರರಿಗೆ ರೂ 3,00,000/- , ದಿನಾಂಕ: 14/08/2025 ರಂದು ಮತ್ತು ದಿನಾಂಕ: 16/08/2025 ರಂದು ಎಂ. ರಮಾನಾಥ್ ಬೊಂದೆಲ್ ಮಂಗಳೂರು ಎಂಬ ಖಾತೆದಾರರಿಗೆ ರೂ 25,00,000/- ಹಾಗೂ ದಿನಾಂಕ: 22/08/2025 ರಂದು ಸದಾನಂದ ಜಿ. ರಾವ್ ಕುಂಜಾಲು ಉಡುಪಿ ಎಂಬ ಖಾತೆದಾರರಿಗೆ ರೂ 25,00,000/- ಸೇರಿ ಒಟ್ಟು 73,00,000/- ಹಣ ಶಾಖೆಯಿಂದ ವರ್ಗಾವಣೆ ಯಾಗಿರುತ್ತದೆ .
- ದಿನಾಂಕ: 25/08/2025 ರಂದು SBI ಮುಂಬೈ ಶಾಖೆಯಿಂದ ಈ ಮೇಲಿನ ಹಣ ವರ್ಗಾವಣೆಯ ವಿವರವನ್ನು E-Mail ಮುಖೇನ ಕೇಳಿದ್ದು, ಅದರಂತೆ ದಿನಾಂಕ: 26/08/2025 ರಂದು ರಾಜೇಶ್ ಗಣಪತಿ ಅವರು ಮಲ್ಪೆ ಶಾಖೆಯಿಂದ ಮೇಲಿನ ಹಣ ವರ್ಗಾವಣೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಮುಂಬೈ ಶಾಖೆಗೆ E-Mail ಮಾಡಿದ್ದು, ಬಳಿಕ ಅದೇ ದಿನ ದಿನಾಂಕ: 26/08/2025 ರಂದು PIRAMAL Finance ಕಂಪೆನಿಯಿಂದ ಅವರ ಅಧಿಕೃತ E-Mail ID [email protected] ರಿಂದ ಸಂದೇಶ ಬಂದಿದ್ದು, ಅದರಲ್ಲಿ ಕಂಪೆನಿಯ ವತಿಯಿಂದ ಮೇಲಿನ ಹಣ ವರ್ಗಾವಣೆಗೆ ಸಂಬಂಧಿಸಿ ಯಾವುದೇ ಮನವಿಯನ್ನು ಮಲ್ಪೆ ಶಾಖೆಗೆ ಕಳುಹಿಸಿರುವುದಿಲ್ಲ. ಎಂಬುದಾಗಿ ತಿಳಿಸಿರುತ್ತಾರೆ. ಪರಿಶೀಲಿಸಿದಾಗ ಆ ಸಮಯ ಮಲ್ಪೆ ಶಾಖೆಯಲ್ಲಿ ಶಾಖಾ ಮ್ಯಾನೇಜರ್ ಆಗಿರುವ ಶ್ರೀಮತಿ ಮೀರ ಪಲ್ಲವಿ ಟಿ.ಹೆಚ್. ಮತ್ತು ಮೇಲೆ ಕಾಣಿಸಿರುವ ಖಾತೆದಾರರು ಮತ್ತು ಇತರರು ಸೇರಿ ನಕಲಿ ದಾಖಲೆಗಳನ್ನು ಸೃಷ್ಠಿಸಿ ದಿನಾಂಕ: 11/08/2025 ರಿಂದ 22/08/2025 ರ ಮದ್ಯಾವಧಿಯಲ್ಲಿ ಒಟ್ಟು 73,00,000/- ಬ್ಯಾಂಕಿನ ಹಣವನ್ನು ದುರುಪಯೋಗಪಡಿಸಿ ಸ್ವಂತಕ್ಕೆ ಬಳಸಿ ಬ್ಯಾಂಕಿಗೆ ನಂಬಿಕೆ ದ್ರೋಹ ಮತ್ತು ವಂಚನೆ ಮಾಡಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
- ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಕಲಂ: 336(2)̧ 336(3) 340(2)̧ 316(5)̧ 318(4)̧ ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.
