IMG_20250825_163749.jpg
Spread the love

ಉಡುಪಿ: ದಿನಾಂಕ:25-08-2025(ಹಾಯ್ ಉಡುಪಿ ನ್ಯೂಸ್) ನಗರದ ಹೋಟೆಲ್ ಒಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗೆ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಂಜುನಾಥ ಬಡಿಗೇರ್‌ ಅವರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ದಿನಾಂಕ 24/08/2025 ರಂದು ಉಡುಪಿ ನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಮಂಜುನಾಥ ಬಡಿಗೇರ್‌, ಅವರಿಗೆ ಮೂಡನಿಡಂಬೂರು ಗ್ರಾಮದ ಗೀತಾಂಜಲಿ ಸಿಲ್ಕ್ಸ್‌ ಬಳಿ ಇರುವ ಸಮ್ಮರ್‌ ಪಾರ್ಕ್‌ ಹೋಟೆಲ್‌ನಲ್ಲಿ ಅನೈತಿಕ ವೇಶ್ಯಾವಾಟಿಕೆ ನಡೆಯುತ್ತಿರುವ ಕುರಿತು ಸಾರ್ವಜನಿಕರು ಮಾಹಿತಿ ನೀಡಿದಂತೆ ಕೂಡಲೇ  ಸಮ್ಮರ್‌ ಪಾರ್ಕ್‌ ಹೋಟೆಲ್‌ಗೆ ಹೋಗಿ ಸ್ವಾಗತಕಾರ ಶ್ರೀನಿವಾಸ ರವರೊಂದಿಗೆ 2 ನೇ ಮಹಡಿಯಲ್ಲಿರುವ ರೂಮ್‌ ನಂಬ್ರ 308 ಕ್ಕೆ ದಾಳಿ ನಡೆಸಿದ್ದಾರೆ .

ಪೊಲೀಸರು ರೂಮ್‌ ನಲ್ಲಿ ಇದ್ದ ಒಬ್ಬ ಮಹಿಳೆಯನ್ನು ವಿಚಾರಿಸಿದ್ದು, ಶರತ್‌ ಯಾನೆ ಮೊಹಮ್ಮದ್‌ ಫಯಾಜ್‌ ಎಂಬ ವ್ಯಕ್ತಿ ನೊಂದ ಮಹಿಳೆಯನ್ನು ಉಡುಪಿಗೆ ಕೆಲಸ ಕೊಡಿಸುವುದಾಗಿ ದಿನಾಂಕ 19/08/2025 ರಂದು ಕರೆಸಿಕೊಂಡು ರೂಮ್‌ನ್ನು ಬುಕ್‌ ಮಾಡಿಸಿಕೊಟ್ಟು ವೇಶ್ಯಾವಾಟಿಕೆ ದಂಧೆ ನಡೆಸಿ, ಅಕ್ರಮ ಲಾಭ ಪಡೆಯುವ ಉದ್ದೇಶ ಹೊಂದಿದ್ದನು ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಮಹಿಳಾ ಪೊಲೀಸ್‌ ಠಾಣೆಯಲ್ಲಿ  ಕಲಂ: 143, 3(5) BNS, ಕಲಂ: 3,4,5,6 Immoral Traffic ( Prevention) Act 1956 ರಂತೆ ಪ್ರಕರಣ ದಾಖಲಾಗಿದೆ.

error: No Copying!