ಗಂಗೊಳ್ಳಿ: ದಿನಾಂಕ: 25-08-2025(ಹಾಯ್ ಉಡುಪಿ ನ್ಯೂಸ್) ತ್ರಾಸಿ ಬೀಚ್ ಬಳಿ ರೆಸಾರ್ಟ್ ಒಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಮಾಹಿತಿ ಮೇರೆಗೆ ದಾಳಿ ನಡೆಸಿದ ಬೈಂದೂರು ವ್ರತ್ತ ನಿರೀಕ್ಷಕರಾದ ಲೇಶ್ ಗಣಪತರಾವ್ ಚೌವ್ಹಾಣ ಅವರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ದಿನಾಂಕ 25/08/2025 ರಂದು ಗಂಗೊಳ್ಳಿ ಪೊಲೀಸ್ ಠಾಣಾ ಸರಹದ್ದಿನ ತ್ರಾಸಿ ಬೀಚ್ ಬಳಿ ಇರುವ ಸಾಯಿ ಖುಷಿ ಹೆಸರಿನ ರೆಸಾರ್ಟ್‌ನ ರೂಮ್ ನಂಬರ್ 108 ರಲ್ಲಿ ಅನೈತಿಕ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಗುಪ್ತ ಮಾಹಿತಿ ಬಂದ ಮೇರೆಗೆ ಬೈಂದೂರು ವ್ರತ್ತ, ಪೊಲೀಸ್ ವ್ರತ್ತ ನಿರೀಕ್ಷಕರಾದ ಲೇಶ್ ಗಣಪತರಾವ್ ಚೌವ್ಹಾಣ ಅವರು ಕೂಡಲೇ ಸಿಬ್ಬಂದಿಯವರೊಂದಿಗೆ ರೆಸಾರ್ಟ್ ಗೆ ದಾಳಿ ನಡೆಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಸಂತ್ರಸ್ಥೆ ಹಾಗೂ ಆಕೆಯ ಜೊತೆಗಿದ್ದ ವ್ಯಕ್ತಿಯನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ .
ಬಂಧಿತರನ್ನು ವಿಚಾರಣೆ ನಡೆಸಿದಾಗ ಸಂತ್ರಸ್ಥೆಯನ್ನು ಶರತ್ ಯಾನೆ ಮೊಹಮ್ಮದ್ ಫಯಾಜ್ ಎಂಬಾತನು ಕೆಲಸ ಕೊಡಿಸುವುದಾಗಿ ಕರೆಯಿಸಿ ತನ್ನಿಂದ ವೇಶ್ಯಾವಾಟಿಕೆ ವೃತ್ತಿ ನಡೆಸುತ್ತಿರುವುದಾಗಿ ಸಂತ್ರಸ್ತೆ ತಿಳಿಸಿರುತ್ತಾಳೆ. ವಶಕ್ಕೆ ಪಡೆದ ವ್ಯಕ್ತಿಗಳಿಂದ 2 ಮೊಬೈಲ್ ಪೋನ್ ಹಾಗೂ KA-20-Z-0074 ನೇ ನಂಬರ್‌ನ ಕಾರನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಆರೋಪಿತ ಶರತ್ ಯಾನೆ ಮೊಹಮ್ಮದ್ ಫಯಾಜ್ ಎಂಬಾತನು ಸಂತ್ರಸ್ಥ ಮಹಿಳೆಯ ಮೂಲಕ ದುರ್ವ್ಯಾಪಾರ ನಡೆಸಿ ಅಕ್ರಮವಾಗಿ ಸಾರ್ವಜನಿಕ ಸ್ಥಳದಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸಿ, ಅಕ್ರಮ ಲಾಭ ಪಡೆಯುತ್ತಿದ್ದನು ಎಂದು ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಕಲಂ:143 BNS, ಕಲಂ:3,4,5,6 Immoral Traffic ( Prevention) Act 1956 ರಂತೆ ಪ್ರಕರಣ ದಾಖಲಾಗಿದೆ.
