Spread the love

ಹಿರಿಯಡ್ಕ: ದಿನಾಂಕ:21-08-2025(ಹಾಯ್ ಉಡುಪಿ ನ್ಯೂಸ್) ಪಂಚಾಯತ್ ಉಪಾಧ್ಯಕ್ಷನೋರ್ವ ಹೊಸದಾಗಿ ಉದ್ಯಮ ಪ್ರಾರಂಭಿಸಿದ ವ್ಯಕ್ತಿ ಯೋರ್ವನನ್ನು  ಬೆದರಿಸಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ನೊಂದ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಕಾರ್ಕಳ ನಿವಾಸಿ ಎಸ್.ಮನೋಜ್‌ ಕುಮಾರ, ಎಂಬವರ ಸರ್ವೇ ನಂಬ್ರ 109/77 A ಜಾಗಕ್ಕೆ ದಿನಾಂಕ 16/08/2025 ರಂದು ಸಂಜೆ  ಹರೀಶ, ಸುನೀಲ್‌, ಸಂದೇಶ ಮತ್ತು ದಿನೇಶ ಎಂಬುವವರು ಅಕ್ರಮವಾಗಿ ಪ್ರವೇಶ ಮಾಡಿ ಮನೋಜ್ ಕುಮಾರ್ ಜಾಗ ತೆಗೆದು ಕೊಂಡ ಬಗ್ಗೆ ವಿಚಾರಿಸಿ ಅನುಮತಿ ಇಲ್ಲದೇ ನೀನು ಮರದ ವ್ಯವಹಾರ ಹೇಗೆ ನಡೆಸುತ್ತೀಯಾ ನಾನು ಇಲ್ಲಿ ಪಂಚಾಯತ್‌ ಉಪಾಧ್ಯಕ್ಷ ಆಗಿರುತ್ತೇನೆ ನೀನು ಇಲ್ಲಿ ವ್ಯವಹಾರ ನಡೆಸಬೇಕಾದರೆ ನಮಗೆ 5,00,000/- ರೂಪಾಯಿ ಹಣವನ್ನು ನೀಡಬೇಕೆಂದು ಬೆದರಿಕೆ ಹಾಕಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ನಂತರ ಈ ಬಗ್ಗೆ ಮಾತನಾಡಲು ನನಗೆ ಮಣಿಪಾಲ ಬ್ಯಾಕಸೆನ್‌ ಬಾರ್‌ ಗೆ ಬರುವಂತೆ ತಿಳಿಸಿದ್ದು ಕುಟ್ಟಿ ಎಂಬವರೊಂದಿಗೆ ಮಣಿಪಾಲದ ಬ್ಯಾಕಸೆನ್‌ ಬಾರ್‌ ಗೆ ಹೋದಾಗ 5,00,000/- ಹಣ ನೀಡಬೇಕೆಂದು ಬೆದರಿಕೆ ಹಾಕಿರುವುದಾಗಿ ಮನೋಜ್ ಕುಮಾರ್ ದೂರನ್ನು ನೀಡಿದ್ದಾರೆ.

ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆಯಲ್ಲಿ  ಕಲಂ: 308(3),351(2),329(3) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!