
ಹೆಬ್ರಿ: ದಿನಾಂಕ: 20/08/2025 (ಹಾಯ್ ಉಡುಪಿ ನ್ಯೂಸ್) ಹೆಬ್ರಿ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ನಡೆಸುತ್ತಿದ್ದ ವ್ಯಕ್ತಿ ಯನ್ನು ಹೆಬ್ರಿ ಪೊಲೀಸ್ ಠಾಣೆಯ ಎಎಸ್ಐ ಪ್ರೀತಂ ಕುಮಾರ್ ಪಯಾಸ್ ಅವರು ಬಂಧಿಸಿದ್ದಾರೆ.
ಹೆಬ್ರಿ ಪೊಲೀಸ್ ಠಾಣೆಯ ಎ,ಎಸ್,ಐ ಪ್ರೀತಂ ಕುಮಾರ್ ಪಯಾಸ್‌ರವರಿಗೆ ದಿನಾಂಕ:19-08-2025 ರಂದು ಹೆಬ್ರಿ ಗ್ರಾಮದ ವಿಜಯಲಕ್ಮೀ ಬಾರ್ ಎಂಡ್ ರೆಸ್ಟೋರೆಂಟ್ ಮತ್ತು ಲಾಡ್ಞ್ ಎದುರು ರಸ್ತೆಯ ಬದಿಯಲ್ಲಿ ತಿರುಗಾಡಿಕೊಂಡು ಓರ್ವ ವ್ಯಕ್ತಿಯು ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜುಗಾರಿ ಎಂಬ ಅಟ ಆಡುತ್ತಿರುವುದಾಗಿ ಬಂದ ಖಿಚಿತ ಮಾಹಿತಿ ಮೇರೆಗೆ ಸ್ಥಳಕ್ಕೆ ದಾಳಿ ನಡೆಸಿದಾಗ ವಿಜಯ ಲಕ್ಮೀ ಬಾರ್ ಎಂಡ್ ರೆಸ್ಟೊರೆಂಟ್ ಎದುರು ರಸ್ತೆಯ ಬದಿಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊಂಡು ಒಂದು ರೂಪಾಯಿಗೆ 70 ರೂ ಎಂದು ಮಟ್ಕಾ ಜೂಜಾಟಕ್ಕೆ ಜನರನ್ನು ಕೂಗಿ ಕರೆದು ವ್ಯಕ್ತಿ ಯೋರ್ವ ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದಲ್ಲಿಗೆ ದಾಳಿ ಮಾಡಿ ಮಟ್ಕಾ ಚೀಟಿ ಬರೆಯುತ್ತಿದ್ದವನನ್ನು ಬಂಧಿಸಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಪುತ್ತೂರು ಗ್ರಾಮದ ಚೇತನ (24) ಉಡುಪಿ ತಾಲೂಕು ನಿವಾಸಿ ಎಂದು ತಿಳಿಸಿದ್ದು ಅತನ ಅಂಗ ಜಪ್ತಿ ಮಾಡಿ ಮಟ್ಕಾ ಜುಗಾರಿ ಆಟದಿಂದ ಸಂಗ್ರಹಿಸಿದ ನಗದು 860/-ರೂ, ಹಾಗೂ ಮಟ್ಕಾ ನಂಬ್ರ ಬರೆದ ಚೀಟಿ -1 ಹಾಗೂ ಬಾಲ್ ಪೆನ್ನು-1 ನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ US 78(1)(3) KP ACT ರಂತೆ ಪ್ರಕರಣ ದಾಖಲಾಗಿದೆ.