Spread the love

ದಿನಾಂಕ:20-08-2025(ಹಾಯ್ ಉಡುಪಿ ನ್ಯೂಸ್)

ಉಡುಪಿ : ಅನಾರೋಗ್ಯ ದಿಂದ ಬಳಳುತ್ತಿದ್ದ ಆಶ್ರಮವಾಸಿಯೊಬ್ಬರು ನಿಧನ ಹೊಂದಿದ್ದು ಮಾಧ್ಯಮ ಪ್ರಕಟಣೆ ನೀಡಿದರೂ ಸಂಬಂಧಿಕರು ಪತ್ತೆಯಾಗದ ಕಾರಣ ವಿಶು ಶೆಟ್ಟಿ ಅಂಬಲಪಾಡಿ ನೇತೃತ್ವದಲ್ಲಿ  ಹಿಂದೂ ರುದ್ರ ಭೂಮಿಯಲ್ಲಿ ಅಂತ್ಯಕ್ರಿಯೆಯನ್ನು ನೆರವೇರಿಸಲಾಯಿತು.

ಮೃತ ವ್ಯಕ್ತಿ ಉಮೇಶ (36) ತೀರ ಅನಾರೋಗ್ಯದಲ್ಲಿದ್ದು ಅಸಹಾಯಕರಾಗಿದ್ದರು. ಈತನಿಗೆ ಕಾರ್ಕಳ ಬೈಲೂರಿನ ಹೊಸಬೆಳಕು ಆಶ್ರಮದ ಮುಖ್ಯಸ್ಥರಾದ ಶ್ರೀಮತಿ ತನುಲಾರವರು ಆಶ್ರಯ ನೀಡಿದ್ದರು. ಉಮೇಶ ತನ್ನ ಕುಟುಂಬದ ಬಗ್ಗೆ ಮಾಹಿತಿ ನೀಡಲು ಅಸಮರ್ಥರಾಗಿದ್ದರು. ಕಾರ್ಕಳ ಠಾಣೆಯಲ್ಲಿ ಕಾನೂನು ಪ್ರಕ್ರಿಯೆ ನಡೆಸಿ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಬಳಿಕ ಅಂತ್ಯಕ್ರಿಯೆ ನಡೆಸಲಾಯಿತು.

ಅಂತ್ಯ ಕ್ರಿಯೆಯಲ್ಲಿ ಆಶ್ರಮದ ಮುಖ್ಯಸ್ಥರಾದ ಶ್ರೀಮತಿ ತನುಲಾರವರು ಸಹಕರಿಸಿದರು. ಹಾಗೂ ಅಂಬಲಪಾಡಿ ಕೃಷ್ಣ ಉಚಿತ ಜೆ ಸಿ ಬಿ ನೀಡಿ ಸಹಕರಿಸಿದರು.

error: No Copying!