
ದಿನಾಂಕ:08-08-2025(ಹಾಯ್ ಉಡುಪಿ ನ್ಯೂಸ್)
ಕುಂದಾಪುರ ತಾಲೂಕಿನ ಹೊಸೂರು ಗ್ರಾಮದ ಸ.ನಂ 141/ರ ಸರಕಾರಿ ಜಮೀನಿನಲ್ಲಿ ಶ್ರೀಮತಿ ಮಂಜುಳಾ ಶೆಟ್ಟಿ ಎಂಬವರು ಅನಧಿಕೃತವಾಗಿ ಮನೆ ನಿರ್ಮಾಣ ಮಾಡುತ್ತಿದ್ದು ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಉಚ್ಛ ನ್ಯಾಯಾಲಯವು ಮನೆ ನಿರ್ಮಾಣ ಕಾರ್ಯ ತಡೆ ಹಿಡಿಯುವಂತೆ ಆದೇಶಿಸಿದೆ.
ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿದ R. I ಯವರಿಗೆ ಕಾನೂನು ಪಾಠ ಹೇಳಿ ಉದ್ಧಟತನದಿಂದ ಮೆರೆದ ಜೀವನಶೆಟ್ಟಿ ಎಂಬವನಿಗೆ ನಿನ್ನ ಮೇಲೆ ಸರಕಾರಿ ಅಧಿಕಾರಿಯವರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮತ್ತು ಉಚ್ಚ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿದ್ದಕ್ಕೆ ಕೇಸು ದಾಖಲಿಸುತ್ತೇವೆ ಎಂದು ಹೇಳಿದಾಗ ನನ್ನ ಮರ್ಯಾದೆ ಪ್ರಶ್ನೆ ನಾನು ಸುಯಿಸೈಡ್ ಮಾಡಿಕೊಳ್ಳುತ್ತೇನೆ ಎಂದು ಜೀವನ್ ಶೆಟ್ಟಿ ಬೆದರಿಕೆ ಒಡ್ಡಿದ್ದಾನೆ ಎನ್ನಲಾಗಿದೆ.
ಸರಕಾರಿ ಜಾಗದಲ್ಲಿ ಅಕ್ರಮ ಮನೆ ನಿರ್ಮಾಣ ಮಾಡುತ್ತಿರುವುದು ಸಾಬೀತಾಗಿ ತಹಸಿಲ್ದಾರರು ನೀಡಿದ 8 ನೋಟಿಸ್ ಅನ್ನು ಉಲ್ಲಂಘಿಸಿದ ಮಂಜುಳಾ ಶೆಟ್ಟಿ ಮೇಲೆ ಕ್ರಮ ಕೈಗೊಳ್ಳಲು ತಹಸಿಲ್ದಾರರು ಹೆದರುತ್ತಿರುವುದಾದರೂ ಏಕೆ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಕೊಂಡು ಸರಕಾರಿ ಜಾಗದಲ್ಲಿ ಅಕ್ರಮವಾಗಿ ಕಟ್ಟುತ್ತಿರುವ ಮನೆಯ ಕಾಮಗಾರಿಗೆ ಕೂಡಲೇ ತಡೆಒಡ್ಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
