
ದಿನಾಂಕ:07-08-2025(ಹಾಯ್ ಉಡುಪಿ ನ್ಯೂಸ್)
ಕೋಟ: ಕರ್ನಾಟಕ ರಾಜ್ಯ ಮೋಟಾರು ಸಾರಿಗೆ ಹಾಗೂ ಇತರ ಸಂಬಂಧಿತ ಕಾರ್ಮಿಕರ ಸಾಮಾಜಿಕ ಭದ್ರತೆ ಮತ್ತು ಕ್ಷೇಮಾಭಿವೃದ್ಧಿ ಮಂಡಳಿ, ಕಾರ್ಮಿಕ ಇಲಾಖೆ ಉಡುಪಿ ಇದರ ಆಶ್ರಯದಲ್ಲಿ ಬುಧವಾರ ರಾಜ್ಯ ಸರಕಾರದಿಂದ ಜಾರಿಗೊಂಡ ಅಸಂಘಟಿತ ಕಾರ್ಮಿಕ ವರ್ಗಕ್ಕೆ ಕಲ್ಯಾಣ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ಉಡುಪಿ ಜಿಲ್ಲಾ ಟ್ಯಾಕ್ಸಿ ಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್‌ನ ಸಾಸ್ತಾನ ಘಟಕದ ಕಚೇರಿಯಲ್ಲಿ ಸ್ಥಳೀಯ ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ಚಾಲಕರಿಗೆ ನೊಂದಣಿ ಮತ್ತು ಸ್ಮಾರ್ಟ್ ಕಾರ್ಡ್ ವಿತರಣಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.
ಜಿಲ್ಲಾ ಕಾರ್ಮಿಕ ಇಲಾಖೆಯ ನಿರ್ದೇಶಕರಾದ ಮಲ್ಲಿಕ್‌ಪ್ರಸಾದ್ ಎನ್.ಎಸ್,ಸಿಬ್ಬಂದಿಗಳಾದ ಸಂಗಯ್ಯ ಮತ್ತು ಮಮತ ಕಾರ್ಯಕ್ರಮ ನೆರವೇರಿಸಿ ಕೊಟ್ಟರು.
ಈ ಸಂದರ್ಭದಲ್ಲಿ ಜಿಲ್ಲಾ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ರಮೇಶ್ ಕೆ.ಕೋಟ್ಯಾನ್,ಜಿಲ್ಲಾ ಉಪಾಧ್ಯಕ್ಷ ರಾದ ಸತೀಶ್ ನಾಯ್ಕ್ ಸಂತೆಕಟ್ಟೆ, ಸಂತೆಕಟ್ಟೆ ಘಟಕದ ಅಧ್ಯಕ್ಷ ಸುನೀಲ್ ಡಿಸೋಜ, ಸಾಸ್ತಾನ ಘಟಕದ ಅಧ್ಯಕ್ಷ ಓಣಿಮನೆ ರಾಘವೇಂದ್ರ ಪೂಜಾರಿ ,ಕಾರ್ಯದರ್ಶಿ ರವಿ ಪೂಜಾರಿ ಪಾಂಡೆಶ್ವರ, ಸದಸ್ಯರಾದ ಕೃಷ್ಣ ಪೂಜಾರಿ ಹಂಗಾರಕಟ್ಟೆ , ಸುಧಾಕರ್ ಅಮೀನ್ , ಅಶೋಕ್ ಶೆಟ್ಟಿಗಾರ್ ಗುಂಡ್ಮಿ ಮತ್ತು ಅಶೋಕ್ ಪೂಜಾರಿ ಪಾತಾಳಬೆಟ್ಟು ಉಪಸ್ಥಿತರಿದ್ದರು.
ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್ ಚಾಲಕರಿಗೆ ನೊಂದಣಿ ಮತ್ತು ಸ್ಮಾರ್ಟ್ ಕಾರ್ಡ್ ವಿತರಣಾ ಕಾರ್ಯಕ್ರಮ ಟ್ಯಾಕ್ಸಿ ಮೆನ್ಸ್ ಮತ್ತು ಮ್ಯಾಕ್ಸಿಕ್ಯಾಬ್ ಅಸೋಸಿಯೇಷನ್‌ನ ಸಾಸ್ತಾನ ಘಟಕದ ಕಚೇರಿಯಲ್ಲಿ ಜರಗಿತು. ಜಿಲ್ಲಾ ಕಾರ್ಮಿಕ ಇಲಾಖೆಯ ನಿರ್ದೇಶಕ ಮಲ್ಲಿಕಾ ಪ್ರಸಾದ್ ಸಿಬ್ಬಂದಿಗಳಾದ ಸಂಗಯ್ಯ , ಮಮತ, ಜಿಲ್ಲಾ ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ರಮೇಶ್ ಕೆ.ಕೋಟ್ಯಾನ್, ಜಿಲ್ಲಾ ಉಪಾಧ್ಯಕ್ಷ ರಾದ ಸತೀಶ್ ನಾಯ್ಕ್ ಸಂತೆಕಟ್ಟೆ ಇದ್ದರು.