Spread the love
  • ಹೆಬ್ರಿ: ದಿನಾಂಕ:07-08-2025(ಹಾಯ್ ಉಡುಪಿ ನ್ಯೂಸ್) ವರಂಗ ಗ್ರಾಮದ ಮುನಿಯಾಲು ಗದ್ದುಗೆ ಮತ್ತು ಮಾರಿಯಮ್ಮ ದೇವಸ್ಥಾನದಲ್ಲಿ ವ್ಯಕ್ತಿ ಯೋರ್ವ ಕಳ್ಳತನಕ್ಕೆ ಯತ್ನ ನಡೆಸಿದ್ದಾನೆ ಎಂದು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
  • ಹೆಬ್ರಿ ಗ್ರಾಮದ ನಿವಾಸಿ ವಿಘ್ನೇಶ್ವರ ಅವರು ವರಂಗ ಗ್ರಾಮದ ಮುನಿಯಾಲು ಗದ್ದುಗೆ ಮತ್ತು ಮಾರಿಯಮ್ಮ ದೇವಸ್ಥಾನದಲ್ಲಿ ಸಹಾಯಕ ಅರ್ಚಕರಾಗಿ ಕೆಲಸ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
  • ದಿನಾಂಕ 05/08/2025 ರಂದು ಮಾರಿಗುಡಿಯಲ್ಲಿ ವಿಶೇಷ ಪೂಜೆ ಇರುವುದರಿಂದ ಮದ್ಯಾಹ್ನ ಸಮಯ ವಿಘ್ನೇಶ್ವರ ಅವರು ದೇವಸ್ಥಾನದಲ್ಲಿ ಇರುವಾಗ ಯಾಗ ಮಂಟಪ ಕಡೆಯಿಂದ ಶಬ್ದ ಬಂದಿದ್ದು ಕೂಡಲೇ ಎದ್ದು ನೋಡಿದಾಗ ಓರ್ವ ಅಪರಿಚಿತ ವ್ಯಕ್ತಿ ದೇವಸ್ಥಾನದ ಯಾಗ ಮಂಟಪದ ಬಳಿ ಇದ್ದ ಸ್ಟೀಲ್‌ ಕಾಣಿಕೆ ಡಬ್ಬಿಯ ಚಿಲಕ ಹಾಗೂ ಬೀಗದ ಕೊಂಡಿಯನ್ನು ಯಾವುದೋ ವಸ್ತುವಿನಿಂದ ಒಡೆದು ತೆಗೆದು ಕಾಣಿಕೆ ಡಬ್ಬಿಯಲ್ಲಿರುವ ಹಣವನ್ನು ಕಳವು ಮಾಡಲು ಪ್ರಯತ್ನ ಮಾಡುತ್ತಿರುವುದು ಕಂಡು ಬಂದಿದ್ದು ನಂತರ ಅವನನ್ನು ಹಿಡಿದು ವಿಚಾರಿಸಿದಾಗ ಆತನ ಹೆಸರು ರಾಘವೇಂದ್ರ ಎಂದು ತಿಳಿಸಿದ್ದು ವಿಪರೀತ ಮದ್ಯಪಾನ ಮಾಡಿರುತ್ತಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
  • ಈ ಬಗ್ಗೆ ಹೆಬ್ರಿ ಪೊಲೀಸ್‌ ಠಾಣೆಯಲ್ಲಿ  ಕಲಂ: 62,303(2) BNS ರಂತೆ ಪ್ರಕರಣ ದಾಖಲಾಗಿದೆ.
error: No Copying!