Spread the love

ಉಡುಪಿ: ನಗರದ ಅಜ್ಜರಕಾಡು ಟೌನ್ ಹಾಲ್ ಎದುರು ಮುಖ್ಯ ರಸ್ತೆಯಲ್ಲಿ  ಕಂಠಪೂರ್ತಿ ಕುಡಿದು ಕೊಂಡು ಮದ್ಯದ ಅಮಲಿನಲ್ಲಿ ಮಿತಿ ಮೀರಿದ ವೇಗದಲ್ಲಿ ಕಾರು ಚಲಾಯಿಸಿ ಕೊಂಡು ಬಂದ ವ್ಯಕ್ತಿಯೋರ್ವರು ರಸ್ತೆ ಬದಿಯಲ್ಲಿ ನಿಂತಿದ್ದ ಟಾಟಾ ಹೇರಿಯರ್ ಕಾರಿಗೆ ಗುದ್ದಿದ ಪರಿಣಾಮ ಕಾರು ಡಿವೈಡರ್ ಮೇಲೆ ಎಸೆಯಲ್ಪಟ್ಟಿದೆ.

ಅಪಘಾತ ನಡೆದ ಸ್ಥಳದಲ್ಲಿ ಯಾವಾಗಲೂ ಪಾದಾಚಾರಿಗಳು, ಕ್ರೀಡಾಳುಗಳು ಸಂಚರಿಸುವ ಸ್ಥಳವಾಗಿದ್ದು ಅಪಘಾತ ಸಮಯದಲ್ಲಿ ಯಾರೂ ಸ್ಥಳದಲ್ಲಿ ಇಲ್ಲದಿದ್ದುದರಿಂದ ಅದ್ರಷ್ಟವಶಾತ್ ಯಾವುದೇ ಅನಾಹುತವಾಗಿಲ್ಲ ಎನ್ನಲಾಗಿದೆ. ಪೊಲೀಸ್ ಇಲಾಖೆ ಎಷ್ಟೇ ಜಾಗ್ರತಿ ಮೂಡಿಸಿದರೂ ಕುಡುಕ ವಾಹನ ಚಾಲಕರು ಸಾರ್ವಜನಿಕರ ಪ್ರಾಣ ದೊಂದಿಗೆ ಚೆಲ್ಲಾಟವಾಡುತ್ತಲೇ ಇದ್ದಾರೆ ಎಂದು ಸಾರ್ವಜನಿಕರು ದೂರಿ ಕೊಂಡಿದ್ದಾರೆ.

error: No Copying!