
ಬೈಂದೂರು: ದಿನಾಂಕ :05-08-2025(ಹಾಯ್ ಉಡುಪಿ ನ್ಯೂಸ್) ಬಿಜೂರು ಗ್ರಾಮದ ವ್ಯಕ್ತಿ ಯೋರ್ವರ ಕಾರನ್ನು ಸಂಬಂಧಿಕರು ಅಗತ್ಯ ಕ್ಕಾಗಿ ಪಡೆದುಕೊಂಡು ನಂತರ ವಂಚನೆ ನಡೆಸಿ ಮಾರಾಟ ಮಾಡಿದ್ದಾರೆ ಎಂದು ನೊಂದ ವ್ಯಕ್ತಿ ಪೊಲೀಸರಿಗೆ ದೂರು ನೀಡಿದ್ದಾರೆ.
ಬೈಂದೂರು,ಬಿಜೂರು ಗ್ರಾಮದ ನಿವಾಸಿ ಮೊಹಮ್ಮದ್ (32) ಎಂಬವರು 8 ಲಕ್ಷ ಮೌಲ್ಯದ KA-20-MD-1761 ಮಾರುತಿ ಸುಜುಕಿ ಬ್ರೀಜಾ ಕಾರಿನ ಮಾಲೀಕರಾಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಕಾರನ್ನು ಮೊಹಮ್ಮದ್ ರವರ ಸಂಬಂಧಿಕರಾದ ಆರೋಪಿಗಳಾದ 1. ರಾಝಿಕ್, 2. ಚುಮ್ಮ ಯಾನೆ ಸುಲೈಮಾನ್, 3. ಸಲಾಮ್ ಎಂಬವರು ದಿನಾಂಕ 17/06/2025 ರಂದು ಒಂದು ದಿನದ ಮಟ್ಟಿಗೆ ಆಸ್ವತ್ರೆಗೆ ಹೋಗಲು ಕಾರನ್ನು ನೀಡುವಂತೆ ಮೊಹಮ್ಮದ್ ರಲ್ಲಿ ಕೇಳಿ ಮೊಹಮ್ಮದ್ ರವರಲ್ಲಿ ಸಂಜೆ ಕಾರನ್ನು ವಾಪಾಸು ತಂದುಕೊಡುವುದಾಗಿ ಮೊಹಮ್ಮದ್ ರವರನ್ನು ನಂಬಿಸಿ ಕಾರನ್ನು ತೆಗೆದುಕೊಂಡು ಹೋದವರು ಕಾರನ್ನು ವಾಪಾಸು ತಂದು ನೀಡದೇ ಈ ಬಗ್ಗೆ ಮೊಹಮ್ಮದ್ ರು ವಿಚಾರಿಸಿದಾಗ ನಾಳೆ ಕೊಡುತ್ತೇನೆಂದು ಹೇಳುತ್ತಾ ದಿನಾಂಕ ವನ್ನು ಮುಂದಕ್ಕೆ ಹಾಕುತ್ತಾ ಇದ್ದವರು ಈ ಕಾರನ್ನು ಬೇರೆಯವರಿಗೆ ಮಾರಾಟ ಮಾಡಿ ಮೊಹಮ್ಮದ್ ರವರಿಗೆ ವಂಚಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಮೊಹಮ್ಮದ್ ರವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಲಂ: 316 (2), 318(4) ಜೊತೆಗೆ 3(5) BNS ರಂತೆ ಪ್ರಕರಣ ದಾಖಲಾಗಿದೆ.