Spread the love
  • ಬ್ರಹ್ಮಾವರ: ದಿನಾಂಕ:05-08-2025(ಹಾಯ್ ಉಡುಪಿ ನ್ಯೂಸ್) ಪಿಗ್ಮಿ ಏಜೆಂಟ್ ಓರ್ವರ ಮೋಟಾರ್ ಸೈಕಲ್ ನ ಬಾಕ್ಸ್ ನಲ್ಲಿ ಇಟ್ಟಿದ್ದ 65 ಸಾವಿರ ನಗದನ್ನು ಯಾರೋ ಕಳ್ಳರು ಕಳ್ಳತನ ನಡೆಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
  • ಬ್ರಹ್ಮಾವರ,ಮಟಪಾಡಿ ಗ್ರಾಮದ ನಿವಾಸಿ ಸುಭಾಸ್ (37) ಅವರು  ಬ್ರಹ್ಮಾವರ ಮೂರ್ತೆದಾರರ ಸಹಕಾರಿ ಸಂಘದಲ್ಲಿ ಪಿಗ್ಮಿ ಏಜೆಂಟ್‌ ಆಗಿ ಕೆಲಸ ಮಾಡಿಕೊಂಡಿದ್ದು  ಅವರು ದಿನಾಂಕ 04/08/2025 ರಂದು ಸಂಜೆ ಸಂತೆಕಟ್ಟೆ ಉಪ್ಪೂರು ಕಡೆಗಳಲ್ಲಿ ಪಿಗ್ಮಿ ಕಲೆಕ್ಷನ್‌ ಮಾಡಿದ್ದು ಬಳಿಕ ಸಂಜೆ ಬ್ರಹ್ಮಾವರ ತಾಲೂಕು ಚಾಂತಾರು ಗ್ರಾಮದ ಶಿವಳ್ಳಿ ಹೋಟೆಲ್‌ ಎದುರುಗಡೆ ಕರ್ನಾಟಕ ಬ್ಯಾಂಕ್‌ ಎಟಿಎಮ್‌ ಬಳಿ ಮೋಟಾರ್‌ ಸೈಕಲ್‌ ನಂಬ್ರ KA-20-EV-4763 ನೇದನ್ನು ನಿಲ್ಲಿಸಿ ಪಿಗ್ಮೀ ಕಲೆಕ್ಷನ್‌ ಮಾಡಿದ ನಗದು 65,000/- ರೂಪಾಯಿಯನ್ನು ಮೋಟಾರ್‌ ಸೈಕಲ್‌ನ ಸೈಡ್‌ ಬಾಕ್ಸ್‌ನಲ್ಲಿ ಇಟ್ಟು ಬೀಗ ಹಾಕಿ ಬಳಿಕ ಶಿವಳ್ಳಿ ಹೋಟೆಲ್‌ಗೆ  ಹೋಗಿ ಪಿಗ್ಮಿ ಕಲೆಕ್ಷನ್‌ ಮಾಡಿ ವಾಪಾಸು ಬಂದು ನೋಡಿದಾಗ ಮೋಟಾರ್‌ ಸೈಕಲ್‌ನ ಬಾಕ್ಸ್‌ನಲ್ಲಿ ಇಟ್ಟ ನಗದು ಹಣವು ಕಾಣದೇ ಇದ್ದು ಪರಿಶೀಲಿಸಿದಾಗ ಯಾರೋ ಕಳ್ಳರು ಮೋಟಾರ್‌ ಸೈಕಲ್‌ನ ಬೀಗ ಒಡೆದು ಬಾಕ್ಸ್‌ನಲ್ಲಿದ್ದ ನಗದು ಹಣ 65,000/- ರೂಪಾಯಿಯನ್ನು ಮತ್ತು ಪಾನ್‌ ಕಾರ್ಡ್‌, ಆಧಾರ್‌ ಕಾರ್ಡ್‌ ಇತರೇ ದಾಖಲೆ ಪತ್ರವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
  • ಸುಭಾಸ್ ಅವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ  ಕಲಂ: 303(2) BNS ರಂತೆ ಪ್ರಕರಣ ದಾಖಲಾಗಿದೆ.

error: No Copying!