
ಉಡುಪಿ: ದಿನಾಂಕ:04-08-2025(ಹಾಯ್ ಉಡುಪಿ ನ್ಯೂಸ್) ಎಂಟು ದಿನಗಳ ಹಿಂದೆ ಮನೋರೋಗಿ ಯುವಕನನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸಿದ ಯುವಕ ನೀಡಿದ ಮಾಹಿತಿ ಮೇರೆಗೆ ಸಹೋದರನನ್ನು ಪತ್ತೆ ಹಚ್ಚಿ ಹಸ್ತಾಂತರಿಸಿದ ಘಟನೆ ಆಗಸ್ಟ್ 4ರಂದು ನಡೆದಿದೆ.
ಉತ್ತರ ಪ್ರದೇಶ ಮೂಲದ ಬೀರುಸಿಂಗ್(23) ಕಾರ್ಮಿಕನಾಗಿ ಉಡುಪಿಗೆ ಬಂದಿದ್ದು, 8 ದಿನಗಳ ಹಿಂದೆ ಯಾವುದೋ ಕಾರಣಕ್ಕೆ ಮಾನಸಿಕ ಅಸ್ವಸ್ಥನಾಗಿ ಸಾರ್ವಜನಿಕ ವಾಹನಗಳಿಗೆ ಹಾನಿ ಹಾಗೂ ಸಂಚಾರಕ್ಕೆ ಅಡ್ಡಿ ಪಡಿಸುತ್ತಿದ್ದು ಪೊಲೀಸರ ಸಹಾಯದಿಂದ ವಿಶು ಶೆಟ್ಟಿ ಅಂಬಲಪಾಡಿಯವರು ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸಿದ ಯುವಕ ಉತ್ತರಪ್ರದೇಶದ ತನ್ನ ಮನೆಯ ಮಾಹಿತಿ ನೀಡಿದ್ದಾನೆ. ಇದೀಗ ಸಹೋದರ ಉಡುಪಿಗೆ ಬಂದಿದ್ದು ಆಸ್ಪತ್ರೆಯಿಂದ ಯುವಕನನ್ನು ವಶಕ್ಕೆ ಪಡೆದು ಊರಿಗೆ ಕರೆದುಕೊಂಡು ಹೋಗಿದ್ದಾರೆ.
ಸ್ಪಂದಿಸಿದ ಜಿಲ್ಲಾಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ವಿಶು ಶೆಟ್ಟಿ ಕೃತಜ್ಞತೆ ಸಲ್ಲಿಸಿದ್ದಾರೆ.