Spread the love
  • ಮಣಿಪಾಲ: ದಿನಾಂಕ:02-08-2025(ಹಾಯ್ ಉಡುಪಿ ನ್ಯೂಸ್) ಹೆರ್ಗ ಗ್ರಾಮದ ನಿವಾಸಿ ರಮಾದೇವಿರವರಿಗೆ ಪಡುಬಿದ್ರಿ ನಿವಾಸಿ ಜೀನತ್ ಎಂಬ ಮಹಿಳೆ ಮನೆ ಖರೀದಿಗೆ ಸಹಕರಿಸುವುದಾಗಿ ನಂಬಿಸಿ ಐದು ಲಕ್ಷ ರೂಪಾಯಿ ವಂಚನೆ ನಡೆಸಿದ್ದಾರೆಂದು ಪೋಲೀಸರಿಗೆ ದೂರು ನೀಡಿದ್ದಾರೆ.
  • ಉಡುಪಿ ಹೆರ್ಗ ಗ್ರಾಮದ ನಿವಾಸಿ ರಮಾದೇವಿ (58) ಎಂಬವರು ಹೊಸಮನೆ ಖರೀದಿ ಮಾಡುವ ಬಗ್ಗೆ ಮನೆ ಹುಡುಕಾಡುತ್ತಿರುವಾಗ 2024 ರ ಜನವರಿ ತಿಂಗಳಿನಲ್ಲಿ ಪಡುಬಿದ್ರೆ ನಿವಾಸಿ ಜೀನತ್‌ ಎಂಬುವವರ ಪರಿಚಯವಾಗಿದ್ದು ಅವರು ಉಡುಪಿ ತಾಲೂಕು ಅಲೆವೂರು ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನದ ಬಳಿ ಒಂದು ಮನೆ ಇರುವುದಾಗಿಯೂ ತೋರಿಸುವುದಾಗಿ ಹೇಳಿದ್ದು ಅದರಂತೆ ದಿನಾಂಕ 02/02/2024 ರಂದು  ಜೀನತ್‌ ರವರು ಬ್ರೋಕರ್‌ ಪ್ರಭಾಕರ ಎಂಬುವವರೊಂದಿಗೆ ಸೇರಿ ಅಲೆವೂರು ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನದಿಂದ ಸುಮಾರು 300 ಮೀಟರ್‌ ದೂರದಲ್ಲಿ ಇರುವ ನಿತೀಶ್‌ ಎಸ್‌ ಎಂಬವರ ಮಾಲಿಕತ್ವದಲ್ಲಿರುವ ಒಂದು ಹಳೆಯ ಆರ್‌.ಸಿ.ಸಿ ಮನೆಯನ್ನು ತೋರಿಸಿ ಮನೆಯುನ್ನು 24,00000/- ರೂಪಾಯಿಗೆ ಖರೀದಿ ಮಾಡಲು ಒಪ್ಪಿಕೊಂಡಿದ್ದು ಈ ಬಗ್ಗೆ ಕರಾರು ಮಾಡುವ ಸಮಯ ಮುಂಗಡವಾಗಿ 5,00,000/- ಹಣವನ್ನು ಕೊಡಬೇಕು ಎಂಬುದಾಗಿ ಹೇಳಿದ್ದು  ರಮಾದೇವಿರವರು ಅದಕ್ಕೆ ಒಪ್ಪಿಕೊಂಡಿದ್ದು ಈ ಮಧ್ಯೆ ಜೀನತ್‌ ರವರು ಹೊಸಮನೆ ಖರೀದಿ ಮಾಡಲು ಲೋನ್‌ ಮಾಡಿಕೊಡುವುದಾಗಿ ಹೇಳಿ ನಂಬಿಸಿ ಕೈಸಾಲವಾಗಿ ರಮಾದೇವಿ ರವರಿಂದ ಒಟ್ಟು 5,00,000/- ಹಣವನ್ನು ಪಡೆದುಕೊಂಡು ಈ ಹಣವನ್ನು ಮನೆಯ ಕರಾರು ಮಾಡಿಸುವಾಗ ವಾಪಾಸ್ಸು ಕೊಡುತ್ತೇನೆ ಎಂದು ಹೇಳಿ ನಂಬಿಸಿದ್ದು ಮನೆ ಖರೀದಿ ಮಾಡುವ ಬಗ್ಗೆ ದಿನಾಂಕ 15/03/2024 ರಂದು ಉಡುಪಿ ಕೋರ್ಟ್ ನಲ್ಲಿ ವಕೀಲರ ಸಮಕ್ಷಮ ಕರಾರು ಪತ್ರ ಮಾಡಿಕೊಂಡಿದ್ದು ಕರಾರಿನಲ್ಲಿ ನಮೂದಿಸಿದಂತೆ 03 ತಿಂಗಳ ಬಳಿಕ ಕೂಡಾ ಜೀನತ್‌ ರವರು ಆ ಮನೆಯನ್ನು  ರಮಾದೇವಿ ರವರ ಹೆಸರಿಗೆ ಮಾಡಿಕೊಡದೇ ಇದ್ದು ಆ ಬಳಿಕ ಹಣದ ಬಗ್ಗೆ ಕೂಡಾ ಕರಾರು ಮಾಡಿಕೊಂಡಿದ್ದು, ಜೀನತ್‌ ರವರು ಪ್ರಭಾಕರ ಹಾಗೂ ನಿತೀಶ್‌ ಎಸ್‌ ರವರೊಂದಿಗೆ ಸೇರಿಕೊಂಡು ಉಡುಪಿ ತಾಲೂಕು ಅಲೆವೂರು ಗ್ರಾಮದ ವಿಷ್ಣುಮೂರ್ತಿ ದೇವಸ್ಥಾನದ ಬಳಿ ಇರುವ ಯಾವುದೋ ಮನೆಯನ್ನು ತೋರಿಸಿ ಮನೆಯು ನಿತೀಶ್‌ ಎಸ್‌ ರವರ ಮನೆ ಎಂಬುದಾಗಿ 24,00,000/- ಹಣಕ್ಕೆ ಆ ಮನೆಯನ್ನು ಮಾರಾಟ ಮಾಡುವುದಾಗಿ ನಂಬಿಸಿ ಮುಂಗಡವಾಗಿ 5,00,000/- ಹಣವನ್ನು ಪಡೆದುಕೊಂಡು ಈ ಬಗ್ಗೆ ಕರಾರು ಪತ್ರ ಮಾಡಿಸಿಕೊಂಡು ಮೂಲ ಕರಾರು ಪತ್ರವನ್ನು ನೀಡದೇ ಮನೆಯ ದಾಖಲಾತಿಗಳನ್ನು ನೀಡದೇ ಮನೆಯನ್ನು ಕೊಡದೇ ಹಾಗೂ ಜೀನತ್‌ ರವರು ಸಾಲದ ರೂಪದಲ್ಲಿ ಪಡೆದುಕೊಂಡ 5,00,000/- ರೂ ಹಣವನ್ನು ಕೂಡಾ ವಾಪಾಸ್ಸು ಮಾಡದೇ ನಂಬಿಸಿ ಮೋಸ ಮಾಡಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
  • ರಮಾದೇವಿರವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ  ಕಲಂ: 406,409, 420 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
error: No Copying!