Spread the love

ದಿನಾಂಕ:31-07-2025(ಹಾಯ್ ಉಡುಪಿ ನ್ಯೂಸ್) ಮಂಗಳೂರು: ಧರ್ಮಸ್ಥಳದಲ್ಲಿ ಸಾಮೂಹಿಕ ಅಂತ್ಯಕ್ರಿಯೆ ಬಗ್ಗೆ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (SIT)ಒಂದು ದೊಡ್ಡ ಅಸ್ಥಿ ಪಂಜರ ಪತ್ತೆಯಾದ ಆರನೇ ಸ್ಥಳದಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದು, ಅವಶೇಷಗಳ ಸಂಗ್ರಹ ಕಾರ್ಯ ಮುಂದುವರೆದಿದೆ. ಪ್ರಕರಣದ ಪ್ರಾಥಮಿಕ ದೂರುದಾರ ಈ ಜಾಗವನ್ನು ತೋರಿಸಿದ್ದಾರೆ.

ಈ ಪ್ರದೇಶದಲ್ಲಿ ನೂರಾರು ಶವಗಳನ್ನು ಹೂತ್ತಿಟ್ಟ ಆರೋಪ ಕೇಳಿಬಂದಿದೆ. 6ನೇ ಸ್ಥಳದಲ್ಲಿ ನಡೆಸಿದ ಉತ್ಖನನ ವೇಳೆ ಮೃತದೇಹದ ಕುರುಹು ಪತ್ತೆಯಾಗಿದೆ. ಈ ಜಾಗವನ್ನು ಸಂರಕ್ಷಿಸಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದಾರೆ.

ನದಿ ತಟದಲ್ಲಿರುವುದರಿಂದ ನೀರು ಅಥವಾ ಮಳೆಯಿಂದ ಯಾವುದೇ ಹಾನಿಯಾಗದಂತೆ ಮೇಲ್ಭಾಗ ಮತ್ತು ನಾಲ್ಕು ಕಡೆಗಳಲ್ಲಿ ರಕ್ಷಣಾತ್ಮಕ ಶೀಟ್ ಗಳನ್ನು ಅಳವಡಿಸಲಾಗಿದೆ. ಅವಶೇಷಗಳನ್ನು ವಿಶ್ಲೇಷಣೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸುವ ನಿರೀಕ್ಷೆಯಿದೆ. ಅವಶೇಷಗಳನ್ನು ತಕ್ಷಣಕ್ಕೆ ಪ್ರಯೋಗಾಲಯಕ್ಕೆ ಕಳುಹಿಸದ ಅಧಿಕಾರಿಗಳು, ವಿಶ್ಲೇಷಣೆಗೆ ಅನುಕೂಲವಾಗುವಂತೆ ಇತರ ಎರಡು ಜಾಗಗಳಲ್ಲಿ ದೊರೆತ ವಸ್ತುಗಳೊಂದಿಗೆ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಸಾಧ್ಯತೆಯಿದೆ.

6ನೇ ಜಾಗದಲ್ಲಿ ಅವಶೇಷಗಳ ಸಂಗ್ರಹಣೆ ಪ್ರಕ್ರಿಯೆಯು ಮುಕ್ತಾಯದ ಹಂತದಲ್ಲಿದ್ದು, ಶೀಘ್ರದಲ್ಲೇ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.

ಮಾನವನ ಮೃತದೇಹ ಪತ್ತೆಯಾದ ಆರನೇ ಜಾಗದಲ್ಲಿ ಎಸ್‌ಐಟಿ ಹೆಚ್ಚಿನ ನಿಗಾ ವಹಿಸಿದೆ. ಅವಶೇಷ ಸಂಗ್ರಹ ವೇಳೆಯಲ್ಲಿ ಯಾವುದೇ ಸಾಕ್ಷಿಗಳು ಕಳೆದುಹೋಗದಂತೆ ಅಥವಾ ತೊಂದರೆಯಾಗದಂತೆ ಕ್ರಮ ಕೈಗೊಂಡಿರುವುದಾಗಿ ಪೊಲೀಸ್ ಮೂಲಗಳು ಹೇಳಿವೆ.

ಉತ್ಖನನ್ನ ವೇಳೆ ದೊರೆತ ಅವಶೇಷಗಳನ್ನು ಸಂರಕ್ಷಿಸಲು ಫೊರೆನ್ಸಿಕ್ ತಂಡಗಳು ತನಿಖಾಧಿಕಾರಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿವೆ. ಧರ್ಮಸ್ಥಳ ಗ್ರಾಮದಲ್ಲಿ ಹಲವು ಸ್ಥಳದಲ್ಲಿ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂಬ ದೂರುದಾರರ ಆರೋಪದ ಮೇಲೆ ಈ ತನಿಖೆ ನಡೆಸಲಾಗುತ್ತಿದೆ.SIT ಇಂತಹ ಅನೇಕ ಸ್ಥಳಗಳನ್ನು ಗುರುತಿಸಿದ್ದು, ಫೋರೆನ್ಸಿಕ್ ಮತ್ತು ಕಾನೂನು ತಜ್ಞರ ಮೇಲ್ವಿಚಾರಣೆಯಲ್ಲಿ ಉತ್ಖನನ ಮತ್ತು ಸಾಕ್ಷ್ಯ ಸಂಗ್ರಹ ಕಾರ್ಯ ನಡೆಯುತ್ತಿದೆ.

SIT ಇಂತಹ ಅನೇಕ ಸ್ಥಳಗಳನ್ನು ಗುರುತಿಸಿದ್ದು, ಫೋರೆನ್ಸಿಕ್ ಮತ್ತು ಕಾನೂನು ತಜ್ಞರ ಮೇಲ್ವಿಚಾರಣೆಯಲ್ಲಿ ಉತ್ಖನನ ಮತ್ತು ಸಾಕ್ಷ್ಯ ಸಂಗ್ರಹ ಕಾರ್ಯ ನಡೆಯುತ್ತಿದೆ.

error: No Copying!