Spread the love

ದಿನಾಂಕ:31-07-2025(ಹಾಯ್ ಉಡುಪಿ ನ್ಯೂಸ್)

ಕೋಟ: ಇಲ್ಲಿನ ಸಾಸ್ತಾನದ ಐರೋಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಕೋಡಿ ರಸ್ತೆ ಸಮೀಪ ನಿರ್ಮಾಣಗೊಳ್ಳಲಿರುವ ಮದ್ಯದಂಗಡಿಯ ವಿರುದ್ಧ ಅಲ್ಲಿನ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ ಘಟನೆ ಗುರುವಾರ ನಡೆದಿದೆ.

ಸ್ಥಳೀಯವಾಗಿ ಶಿಶುಮಂದಿರ ,ಪಶು ಅಸ್ಪತ್ರೆ ಸೇರಿದಂತೆ ಅನೇಕ ಮನೆಗಳು ವಾಸ್ತವ್ಯವಿದ್ದು ಸಾರ್ವಜನಿಕರಿಗೆ ಸಮಸ್ಯೆಯಾಗಲಿದೆ ಎಂದು ಹೋರಾಟ ಸಮಿತಿ ಪ್ರಮುಖರಾದ  ರಶಿರಾಜ್ ಸಾಸ್ತಾನ ಮಾಧ್ಯಮಕ್ಕೆ ತಿಳಿಸಿ ಐರೋಡಿ ಗ್ರಾಮಪಂಚಾಯತ್ ಗೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ಪಂಚಾಯತ್ ಅಧ್ಯಕ್ಷೆ ಸಕು ,ಅಭಿವೃದ್ಧಿ ಅಧಿಕಾರಿ ಪ್ರಶಾಂತ್  ಮನವಿ ಸ್ವೀಕರಿಸಿದರು.ಪಂಚಾಯತ್ ಸದಸ್ಯ ನವೀನ್ ಕಾರಂತ್ ,ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು.

error: No Copying!