Spread the love

ಕಲ್ಮಾಡಿ: ದಿ. ವಿಠಲ.ಜಿ.ಕೋಟ್ಯಾನ್ ಕಲ್ಮಾಡಿ ಇವರ ಸ್ಮರಣಾರ್ಥ ವಾಗಿ ಅವರ ಪತ್ನಿ ಮತ್ತು ಮಕ್ಕಳು ಹಾಗೂ ಅಳಿಯಂದಿರು ಕಲ್ಮಾಡಿ ಯುವಕ ವ್ರಂದಕ್ಕೆ ಸಮಾಜ ಸೇವಕ ಸತೀಶ್ ಕುಂದರ್ ಕಲ್ಮಾಡಿ ಇವರ ಮುಂದಾಳತ್ವದಲ್ಲಿ ಎರಡು ಸ್ಟೀಲ್ ಬೆಂಚು ಗಳನ್ನು ಕೊಡುಗೆಯಾಗಿ ನೀಡಿದರು .

ಶವ ಸಂಸ್ಕಾರ ಸಂದರ್ಭದಲ್ಲಿ ಶವಕ್ಕೆ ಸ್ನಾನ ಮಾಡಿಸಲು ಅಗತ್ಯ ವಿರುವ ಸ್ಟೀಲ್ ಬೆಂಚುಗಳ ಕೊರತೆಯನ್ನು ಮನಗಂಡು ಈ ಕೊಡುಗೆಯನ್ನು ನೀಡಲಾಗಿದೆ ಎಂದು ಸತೀಶ್ ಕುಂದರ್ ಕಲ್ಮಾಡಿ ಮಾಹಿತಿ ನೀಡಿದ್ದಾರೆ. ಸಾರ್ವಜನಿಕರಿಗೆ ಅಗತ್ಯ ವಿರುವವರು ಈ ಸ್ಟೀಲ್ ಬೆಂಚುಗಳನ್ನು ಉಚಿತವಾಗಿ ಕಲ್ಮಾಡಿ ಯುವಕ ಸಂಘದ ಮೂಲಕ ಉಪಯೋಗಕ್ಕೆ ಪಡೆಯ ಬಹುದು ಎಂದಿದ್ದಾರೆ.

error: No Copying!