


ಕಾರವಾರ ;ಅಂಕೋಲೆಯ ಅಗಸೂರು ಸೇತುವೆಯಿಂದ ಕೆಳಗೆ ಉರುಳಿದ ಖಾಸಗಿ ಬಸ್ ನಲ್ಲಿದ್ದ
ಓರ್ವ ಪ್ರಯಾಣಿಕರ ಸಾವನ್ನಪ್ಪಿದ್ದು 18 ಮಂದಿಗೆ ಗಾಯವಾಗಿದೆ. ರಸ್ತೆ ಹೊಂಡ ತಪ್ಪಿಸಲು ಯತ್ನಿಸುತ್ತಿದ್ದ ಬಸ್ ಚಾಲಕನ ನಿಯಂತ್ರಣ ಕಳೆದುಕೊಂಡು ಅಗಸೂರು ಸೇತುವೆಯಿಂದ ಕೆಳಗೆ ಉರುಳಿದೆ, ಬಸ್ಸು ಬೆಳಗಾವಿಯಿಂದ ಮಂಗಳೂರಿಗೆ ಪ್ರಯಾಣಿಸುತ್ತಿತ್ತು. ಗಾಯಗೊಂಡ ಪ್ರಯಾಣಿಕರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ, ಗಾಯಗೊಂಡ 18 ಜನರಲ್ಲಿ ಮೂರು ಜನರನ್ನು ಬೆಳಗಾವಿ ಆಸ್ಪತ್ರೆಗೆ ದಾಖಲು ಮಾಡಿದ್ದು ,ಇಬ್ಬರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ, ರಸ್ತೆ ದುರವಸ್ಥೆ ಯ ಬಗ್ಗೆ ಸಾರ್ವಜನಿಕರು ಅಕ್ರೋಶವನ್ನು ಹೊರಹಾಕಿದ್ದಾರೆ.