Spread the love

ಕುಂದಾಪುರ: ದಿನಾಂಕ :20-07-2025( ಹಾಯ್ ಉಡುಪಿ ನ್ಯೂಸ್) ಗುಜ್ಜಾಡಿ ಗ್ರಾಮಸ್ಥರು ಅನಾದಿ ಕಾಲದಿಂದ ಗ್ರಾಮದಲ್ಲಿದ್ದ ಸ್ಮಶಾನವನ್ನು ಉಪಯೋಗಿಸಿ ಕೊಂಡಿರುತ್ತಾರೆ ಎಂದೂ, ಇತ್ತೀಚಿನ ದಿನಗಳಲ್ಲಿ ಶರತ್ ಜಯರಾಂ  ಎನ್ನುವ ವ್ಯಕ್ತಿ ಅಲ್ಲಿ ಸ್ಮಶಾನಕ್ಕೆ ಹತ್ತಿರ ಇರುವ  ಜಾಗವನ್ನು ಖರೀದಿಸಿ ಸ್ಮಶಾನಕ್ಕೆ ಹೋಗುವ ದಾರಿಯನ್ನೇ ಅತಿಕ್ರಮಿಸಿ ಮತ್ತು ಸ್ಮಶಾನವನ್ನು ಕೆಡವುವ ಮೂಲಕ
ಸರ್ಕಾರಿ ಜಾಗವನ್ನು ಅತಿಕ್ರಮಿಸಿ ಗ್ರಾಮಸ್ಥರಿಗೆ ಬೆದರಿಕೆ ಹಾಕಿರುತ್ತಾನೆ ಎಂದು ಗುಜ್ಜಾಡಿ ಗ್ರಾಮಸ್ಥರು ಇದನ್ನು ವಿರೋಧಿಸಿ ಅಹೋರಾತ್ರಿ ಹೋರಾಟವನ್ನು ಮಾಡುತ್ತಿದ್ದಾರೆ .

ಈಗಾಗಲೇ ಗ್ರಾಮಸ್ಥರು ಗ್ರಾಮ ಪಂಚಾಯತ್, ತಹಸಿಲ್ದಾರ್ ಮತ್ತು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದ್ದರೂ ಅದನ್ನು ಗಣನೆಗೆ ತೆಗೆದುಕೊಳ್ಳದೆ, ಗ್ರಾಮ ಪಂಚಾಯತ್ ನವರು ಉದ್ಯಮಿಗೆ ಅನುಮತಿ ನೀಡಿರುತ್ತಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗುಜ್ಜಾಡಿ  ಗ್ರಾಮಸ್ಥರು  ಪ್ರತಿಭಟನೆಯ ಹತ್ತನೆಯ ದಿನದಂದು ಅಹೋರಾತ್ರಿ  ಮುಷ್ಕರ ಮಾಡಿದಾಗ ಸ್ಥಳಕ್ಕೆ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ ಮತ್ತು ಬೈಂದೂರು ಶಾಸಕ ಗುರುರಾಜ್ ಗಂಟಿ ಹೊಳೆ  ಭೇಟಿ ನೀಡಿ ನಿರಂತರವಾಗಿ ನಡೆದ ಮುಷ್ಕರ ತಿಳಿಗೊಳಿಸಲು ಮನ ಒಲಿಸಿದ್ದಾರೆ.
ಪ್ರಭಾರ ಎಸಿಯವರಾದ ರವೀಂದ್ರ ರವರು ಮಾತನಾಡಿ ಸರ್ಕಾರಿ ಜಾಗವನ್ನು ಯಾವುದೇ ಕಾರಣಕ್ಕೂ  ಅತಿಕ್ರಮಿಸಲು ಅನುಮತಿ ಕೊಡುವುದಿಲ್ಲ, ಅದು ಸರ್ಕಾರಿ ಜಾಗ ,ನಾವು ಬೇಲಿಯನ್ನು ನಿರ್ಮಿಸುತ್ತೇವೆ, ಗ್ರಾಮ ಪಂಚಾಯತ್ ಪಿಡಿಓ ಮಾತನಾಡಿ ನಾವು ಕೊಟ್ಟಿರುವಂತಹ  ಅನುಮತಿಯನ್ನು ರದ್ದುಪಡಿಸಿದ್ದೇವೆ ಎಂದರು. ಅಧಿಕಾರಿಗಳಾದ Ri ರಾಘವೇಂದ್ರ ಮಾತನಾಡಿ ಸ್ಮಶಾನಕ್ಕೆ ಹೋಗುವ ದಾರಿಗೆ ಸರ್ಕಾರದ ನಿಯಮದ ಭಾಗವಾಗಿ  ಆ ಜಾಗವನ್ನು ಗ್ರಾಮಸ್ಥರಿಗೆ ನೀಡಲು ಅನುವು ಮಾಡಿಕೊಡುತ್ತೇವೆ.
ಬೈಂದೂರು ಶಾಸಕ ಗುರುರಾಜ್ ಗಂಟಿ ಹೊಳೆ ಮಾತನಾಡಿ ಅಧಿಕಾರಿಗಳಿಗು ಮತ್ತು ಉದ್ಯಮಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮುಷ್ಕರದಲ್ಲಿ ಪಾಲ್ಗೊಂಡ ಸ್ಥಳೀಯ ವ್ಯಕ್ತಿಗಳು ಮಾತನಾಡಿ ನಾವು ಹತ್ತು ದಿನದಿಂದ ಮುಷ್ಕರದಲ್ಲಿ ಪಾಲ್ಗೊಂಡರು ಯಾವುದೇ ರಾಜಕೀಯ ವ್ಯಕ್ತಿಗಳು ಮತ್ತು ಅಧಿಕಾರಿಗಳು ಸ್ಥಳಕ್ಕೆ ಬರಲಿಲ್ಲ  ಮತ್ತು ಗಮನಕ್ಕೆ ತಂದರೂ ನಮ್ಮ ಅಹವಾಲನ್ನು ಸ್ವೀಕರಿಸದೆ ಇರುವುದರಿಂದ ಕೂಡಲೇ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದರು.

ಸ್ಥಳದಲ್ಲಿ ಪಟೇಲ್ ನಾಗೇಶ್ ಖಾರ್ವಿ, ಸುರೇಶ್ ಖಾರ್ವಿ,ಚೌಕಿ ಮೋಹನ್,ಪ್ರಭಾರ ಎಸಿಯವರಾದ ರವೀಂದ್ರ,ರೆವಿನ್ಯೂ ಅಧಿಕಾರಿಗಳಾದ ರಾಘವೇಂದ್ರ, ಪೋಲೀಸ್ ಅಧಿಕಾರಿಗಳು, ಗ್ರಾಮ ಪಂಚಾಯತ್ ಪಿಡಿಓ , ಶಾಸಕ ಗುರುರಾಜ್ ಗಂಟಿ ಹೊಳೆ ಮತ್ತು ಮುಷ್ಕರದಲ್ಲಿ ಪಾಲ್ಗೊಂಡಿದ್ದ ಗುಜ್ಜಾಡಿ ಗ್ರಾಮಸ್ಥರು ಉಪಸ್ಥಿತರಿದ್ದರು.

error: No Copying!