Spread the love

ಪಡುಬಿದ್ರಿ: ದಿನಾಂಕ:12-07-2025(ಹಾಯ್ ಉಡುಪಿ ನ್ಯೂಸ್) ಬಸ್ಸಿನ ಟೈಮಿಂಗ್ ವಿಚಾರದಲ್ಲಿ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿದ್ದಾರೆ ಎಂದು ನೊಂದ ಬಸ್ ಚಾಲಕರು ಓರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.

ಕಾಪು ಬಡಾ ಗ್ರಾಮದ ನಿವಾಸಿ ಇಮ್ತಿಯಾಜ್‌ ಪಾಶ (44) ಎಂಬವರು KA-20 AA-7676ನೇ ನವದುರ್ಗಾ ಬಸ್ಸಿನ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ದಿನಾಂಕ 10/07/2025ರಂದು ಹೆಜಮಾಡಿ ಗ್ರಾಮದ ಟೋಲ್ ಗೇಟಿನಿಂದ ಮುಂದೆ ಶಿವನಗರ ಕ್ರಾಸ್ ಬಳಿ ರಾ.ಹೆ 66 ಎಂಬಲ್ಲಿ ಆಪಾದಿತ ಕಲೀಲ್‌ ನು ತನ್ನ KA-20 AB-9359 ನೇ A.K.M.S ಬಸ್ಸನ್ನು  ಇಮ್ತಿಯಾಜ್ ಪಾಶಾ ರ ಬಸ್ಸಿನ ಎದುರು ಅಡ್ಡ ಇಟ್ಟು ಮುಂದಕ್ಕೆ ಹೋಗದಂತೆ ತಡೆದು ನಿಲ್ಲಿಸಿ ಬಸ್ಸಿನ ಟೈಮಿಂಗ್ ವಿಚಾರವಾಗಿ ಇಮ್ತಿಯಾಜ್ ಪಾಶಾ ರಿಗೆ ಆಪಾದಿತ ಕಲೀಲ್ ಮತ್ತು ಮುನ್ನರವರು ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಅದೇ ದಿನ ರಾತ್ರಿ  AKMS ಬಸ್ಸಿನ ಮಾಲಕ ಆಪಾದಿತ ಸೈಪುದ್ದೀನ್ ಇಮ್ತಿಯಾಜ್ ಪಾಶಾರಿಗೆ ಪೋನ್ ಮಾಡಿ ಇಮ್ತಿಯಾಜ್ ಪಾಶಾರಿಗೆ, ಅವರ ಹೆಂಡತಿ, ಮಗಳಿಗೆ ಮತ್ತು ತಾಯಿಗೆ ಅಶ್ಲೀಲ ಹಾಗೂ ಅವಾಚ್ಯ ಶಬ್ದಗಳಿಂದ ಬೈದು ನಿನ್ನ ಮನೆಗೆ ನುಗ್ಗಿ ಸಾಯಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಆ ಸಮಯದಲಿ ಮ್ಯಾನೇಜರ್ ಆಪಾದಿತ ಶಹರನ್‌  ಕಾನ್ಪರೆನ್ಸ್ ಕಾಲ್‌ ನಲ್ಲಿ ಇದ್ದು ಅವನು ಕೂಡಾ ಅವಾಚ್ಯ ವಾಗಿ ಬೈದು ಸಾಯಿಸುತ್ತೇನೆಂದು ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ  ಕಲಂ: 126(2),352,351(2) ಜೊತೆಗೆ 3(5) ಬಿ ಎನ್‌ ಎಸ್ ರಂತೆ ಪ್ರಕರಣ ದಾಖಲಾಗಿದೆ.

error: No Copying!