
ಮಣಿಪಾಲ: ದಿನಾಂಕ:12/07/2025( ಹಾಯ್ ಉಡುಪಿ ನ್ಯೂಸ್) ಶಿವಳ್ಳಿ ಗ್ರಾಮದ ನಿವಾಸಿ ಬಸಪ್ಪ ಚಲವಾದಿ ಎಂಬವರು ಕಳೆದ ಐದು ದಿನಗಳಿಂದ ಕಾಣೆಯಾಗಿದ್ದಾರೆ ಎಂದು ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅವರ ಮಗ ದೂರು ನೀಡಿದ್ದಾರೆ.
ಉಡುಪಿ ಶಿವಳ್ಳಿ ಗ್ರಾಮದ ನಿವಾಸಿ ಸಂಗಪ್ಪ ಚಲವಾದಿ (19) ಇವರ ತಂದೆ ಬಸಪ್ಪ ಚಲವಾದಿ (50) ರವರು ಉಡುಪಿಯಲ್ಲಿ ಗಾರೆ ಕೆಲಸ ಮಾಡಿಕೊಂಡಿದ್ದು ಇವರು ಪ್ರತಿದಿನ ಸಂಜೆ 7:00 ಗಂಟೆಯ ಸಮಯಕ್ಕೆ ಇಂದ್ರಾಳಿಯಲ್ಲಿರುವ ಗುರು ಬಾರ್ ಆಂಡ್ ರೆಸ್ಟೋರೆಂಟ್ ಗೆ ಹೋಗಿ ಮಧ್ಯಪಾನ ಮಾಡಿ ರಾತ್ರಿ ಮನೆಗೆ ಬರುತ್ತಿದ್ದವರು ದಿನಾಂಕ 06/07/2025 ರಂದು ಸಂಜೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಗುರು ಬಾರ್ ಆಂಡ್ ರೆಸ್ಟೋರೆಂಟ್ ಗೆ ಹೋದವರು ಮನೆಗೆ ವಾಪಾಸ್ಸು ಬಾರದೇ ಸಂಬಂದಿಕರ ಮನೆಗೂ ಹೋಗದೆ ಕಾಣೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿದೆ.