
ಹೆಬ್ರಿ: ದಿನಾಂಕ :10-07-2025(ಹಾಯ್ ಉಡುಪಿ ನ್ಯೂಸ್) ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಜವಾನನಾಗಿ ಕೆಲಸ ಮಾಡಿ ಕೊಂಡಿರುವ ಶಂಕರ ಎಂಬವರಿಗೆ ಆಡಳಿತ ಮಂಡಳಿಯವರು ಮಾನಸಿಕ ಹಿಂಸೆನೀಡಿ ದೌರ್ಜನ್ಯ ಎಸಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಹೆಬ್ರಿ ಶಿವಪುರ ಗ್ರಾಮದ ನಿವಾಸಿ ಶಂಕರ ಎಂಬವರು ಪರಿಶಿಷ್ಟ ಪಂಗಡಕ್ಕೆ ಸೇರಿದವರಾಗಿದ್ದು ಸುಮಾರು 30 ವರ್ಷಗಳಿಂದ ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಜವಾನನಾಗಿ ಕೆಲಸ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಸಂಘದಲ್ಲಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಯಾಗಿರುವ ಶೀನ ಹಾಗೂ ಅದ್ಯಕ್ಷರಾದ ನವೀನ ಕೆ, ಹಾಗೂ ಇದೇ ಸೇವಾ ಸಹಕಾರಿ ಸಂಘದ 12 ಜನ ನಿರ್ದೇಶಕರು ಮತ್ತು ನಾಡ್ಪಾಲು ಗ್ರಾಮ ಕಾಸನಮಕ್ಕಿ ಸುಂದರ ಇವರುಗಳು ಸೇರಿ ಶಂಕರರವರು ಪರಿಶಿಷ್ಟ ಪಂಗಡಕ್ಕೆ ಸೇರಿದವರು ಎಂದು ಗೊತ್ತಿದ್ದೂ ಉದ್ದೇಶಪೂರ್ವಕವಾಗಿ ಸಂಬಳ ನೀಡದೆ ಶಂಕರರವರನ್ನು ಕೆಲಸದಿಂದ ಅಮಾನತುಗೊಳಿಸಿ ಆರ್ಥಿಕ ಬಹಿಷ್ಕಾರ ಮಾಡಿರುತ್ತಾರೆ ಅಲ್ಲದೆ ಶಂಕರರವರ ವಿರುದ್ದ ಸುಳ್ಳು, ಕಿರುಕುಳ , ದ್ವೇಷ ಪೂರಿತ ದಾವೆ ಮೊಕದ್ದಮೆ ಹಾಗೂ ಕಾನೂನು ವ್ಯವಹಾರ ಮಾಡಿ ಮಾನಸಿಕ ಹಿಂಸೆ ನೀಡಿ ದೌರ್ಜನ್ಯ ಎಸಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಕಲಂ: 3(1) (p), 3(1)(z c) SC ST ACTರಂತೆ ಪ್ರಕರಣ ದಾಖಲಾಗಿದೆ..