
ದಿನಾಂಕ:09-07-2025(ಹಾಯ್ ಉಡುಪಿ ನ್ಯೂಸ್) ಕೋಟ: ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಘಟಪ್ರಭಾ ಕೆ.ಎಚ್.ಐ (ಕರ್ನಾಟಕ ಹೆಲ್ತ್ ಇನ್ಸ್ಟಿಟ್ಯೂಟ್) ಆಸ್ಪತ್ರೆ ಈಗ ಈ ಆರೋಗ್ಯಧಾಮ ಇನ್ನೊಂದು ಹೆಜ್ಜೆ ಮುಂದೆ ಇಟ್ಟಿದೆ. ಯಕ್ಷಗಾನ ಕಲಾವಿದೆ ಡಾ. ಪ್ರೀತಿ ಕೆ. ಮೋಹನ್‌ರ ಆಸಕ್ತಿಯ ಮೇರೆಗೆ ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ನವರ ಸಂಯೋಜನೆಯಲ್ಲಿ ಈ ಘಟಪ್ರಭಾ ಕರ್ನಾಟಕ ಆರೋಗ್ಯ ಧಾಮದಲ್ಲಿ ಇಲ್ಲಿನ ಪ್ರಾಥಮಿಕ ಶಾಲಾ ಮಕ್ಕಳು ಮತ್ತು ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಜು.02ರಂದು ಯಕ್ಷಗಾನ ತರಬೇತಿ ಪ್ರಾರಂಭಿಸಿದರು.
ಈ ಕಾರ್ಯಕ್ರಮವನ್ನು ಮುಖ್ಯ ಆರೋಗ್ಯ ಅಧಿಕಾರಿ ಡಾ. ಸ್ವಾತಿ ಘನಶ್ಯಾಮ ವೈದ್ಯರು ಉದ್ಘಾಟಿಸಿ ಮಾತನಾಡಿ ನಮ್ಮ ಸಂಸ್ಥೆಯ ಹಿರಿಯರ ಸದುದ್ದೇಶದಿಂದ ಗ್ರಾಮೀಣ ಪ್ರದೇಶದಲ್ಲಿ ತುಂಬ ಕಷ್ಟಪಟ್ಟು ಕರ್ನಾಟಕ ಆರೋಗ್ಯಧಾಮ ಆಸ್ಪತ್ರೆ ಕಟ್ಟಿ ಬೆಳೆಸಿದ್ದಾರೆ. ಗ್ರಾಮೀಣ ಬಡವರಿಗೆ ಆಧುನಿಕ ವೈದ್ಯಕೀಯ ಸೌಲಭ್ಯ ಕೈಗೆಟಕುವ ದರದಲ್ಲಿ ದೊರೆಯಬೇಕೆಂದು ಮಹದಾಸೆಯ ಸಾಕಾರ ಮಾಡಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರ ಪದ್ಮಭೂಷಣ ಡಾ. ಹರ್ಡೀಕರರವರ ಪ್ರಭಾವದಿಂದ ನಮ್ಮ ಸಂಸ್ಥೆಯು ಮಹಾತ್ಮ ಗಾಂಧೀಜಿಯವರ ಆದರ್ಶದೊಂದಿಗೆ ನಡೆಯುವ ಈ ಆರೋಗ್ಯ ಧಾಮದಲ್ಲಿ ಕರಾವಳಿಯ ಈ ಗಂಡುಕಲೆಯಾದ ಯಕ್ಷಗಾನ ಕರ್ನಾಟಕದ ಎಲ್ಲಾ ಜಿಲ್ಲೆಯಲ್ಲೂ ಜನಪ್ರಿಯವಾಗಿದೆ.
ಹಾಗೆ ಯಕ್ಷಗಾನ ಕಲಾವಿದೆ ಡಾ. ಪ್ರೀತಿ ಕೆ. ಮೋಹನ್ ನವರ ಸಹಕಾರದಿಂದ ನಮ್ಮ ಆರೋಗ್ಯ ಧಾಮದಲ್ಲಿ ಇಲ್ಲಿನ ಶಾಲಾ ಮಕ್ಕಳಿಗೆ ಹಾಗೂ ನರ್ಸಿಂಗ್ ಕಾಲೇಜ್ ವಿದ್ಯಾರ್ಥಿಗಳಿಗೆ, ಯಕ್ಷಗಾನ ತರಬೇತಿ ನಡೆಸಲು ತುಂಬಾ ಖುಷಿಯಾಗುತ್ತೆ ಎಂದರು.
ವೇದಿಕೆಯಲ್ಲಿ ಮಾಜಿ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾದ ಕೆ. ಮೋಹನ್, ಸಂಪನ್ಮೂಲ ವ್ಯಕ್ತಿಯಾದ ಡಾ. ಪ್ರೀತಿ ಕೆ. ಮೋಹನ್, ಯಕ್ಷಾಂಗಣ ಟ್ರಸ್ಟ್ನ ಟ್ರಸ್ಟಿ ಯಾದ ವೀಣಾ ಕೆ. ಮೋಹನ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಯಕ್ಷಗುರು ಪ್ರಿಯಾಂಕ ಕೆ. ಮೋಹನ್ ನಿರೂಪಿಸಿದರು. ವೀಣಾ ಕೆ. ಮೋಹನ್ ವಂದಿಸಿದರು.
ನoತರ ಯಕ್ಷಗಾನದ ಬಗ್ಗೆ ಯಕ್ಷಗುರು ಪ್ರಿಯಾಂಕ ಕೆ ಮೋಹನ್ ಪರಿಚಯಿಸಿದರು. ನಂತರ ತರಬೇತಿ ಪ್ರಾರಂಭವಾಯಿತು. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಘಟಪ್ರಭಾ ಕೆ.ಎಚ್.ಐ (ಕರ್ನಾಟಕ ಹೆಲ್ತ್ ಇನ್ಸ್ಟಿಟ್ಯೂಟ್) ಆಸ್ಪತ್ರೆಯಲ್ಲಿ ಕಲಾವಿದೆ ಡಾ. ಪ್ರೀತಿ ಕೆ. ಮೋಹನ್‌ರ ವಿಶೇಷ ಕಾಳಜಿಯ ಮೇರೆಗೆ ಬೆಂಗಳೂರಿನ ಯಕ್ಷಾಂಗಣ ಟ್ರಸ್ಟ್ ನವರ ಸಂಯೋಜನೆ – ಯಲ್ಲಿ ಜು.02ರಂದು ಯಕ್ಷಗಾನ ತರಬೇತಿ ಜರಗಿತು. ಮಾಜಿ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಸದಸ್ಯರಾದ ಕೆ. ಮೋಹನ್, ಸಂಪನ್ಮೂಲ ವ್ಯಕ್ತಿಯಾದ ಡಾ. ಪ್ರೀತಿ ಕೆ. ಮೋಹನ್, ಯಕ್ಷಾಂಗಣ ಟ್ರಸ್ಟ್ ನ ಟ್ರಸ್ಟಿ ಯಾದ ವೀಣಾ ಕೆ. ಮೋಹನ್ ಉಪಸ್ಥಿತರಿದ್ದರು.