
ದಿನಾಂಕ: 09-07-2025(ಹಾಯ್ ಉಡುಪಿ ನ್ಯೂಸ್) ಕೋಟ: ಭಾರತ ಕೃಷಿ ಪ್ರಧಾನ ದೇಶ. ನಮ್ಮ ಕೃಷಿ ಪದ್ಧತಿ, ರೈತರ ಪರಿಶ್ರಮ ಹಾಗೂ ಕೃಷಿ ವ್ಯವಸ್ಥೆಯಲ್ಲಿನ ಸವಾಲುಗಳ ಬಗ್ಗೆ ಮಕ್ಕಳು ಎಳವೆಯಲ್ಲಿಯೇ ತಿಳಿದುಕೊಳ್ಳುವುದು ಬಹು ಮುಖ್ಯ ಎಂದು ಕುಂದಾಪುರ ವಲಯದ ಹೆಸಕುತ್ತೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಸ್. ಡಿ. ಎಂ. ಸಿ. ಅಧ್ಯಕ್ಷ ಸುಧಾಕರ ಕುಲಾಲ ನುಡಿದರು.
ಸ್ವತಃ ಕೃಷಿಕರಾಗಿರುವ ಅವರ ಗದ್ದೆಯಲ್ಲಿ ಭತ್ತದ ಸಸಿ ನಾಟಿ ಮಾಡುವ ಅವಕಾಶ ಪಡೆದ ಹೆಸಕುತ್ತೂರು ಸರಕಾರಿ ಪ್ರಾಥಮಿಕ ಶಾಲೆಯ ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಹಿರಿಯ ಕೃಷಿಕರಾದ ಸಂಜೀವ ಕುಲಾಲ ಹಾಗೂ ಶಾಲಾ ಸಹ ಶಿಕ್ಷಕರಾದ ವಿಜಯಾ ಆರ್, ಅಶೋಕ ತೆಕ್ಕಟ್ಟೆ ಉಪಸ್ಥಿತರಿದ್ದರು.