
ಬೈಂದೂರು: ದಿನಾಂಕ: 08/07/2025(ಹಾಯ್ ಉಡುಪಿ ನ್ಯೂಸ್) ಬೈಂದೂರು ಕಡೆಯಿಂದ ಭಟ್ಕಳ ಕಡೆಗೆ ದನಗಳನ್ನು ಕಳವು ಮಾಡಿ ಸಾಗಾಟ ನಡೆಸುತ್ತಿದ್ದ ಕಾರನ್ನು ಬೈಂದೂರು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ನವೀನ್ ಬೋರ್ಕರ್ ಅವರು ವಶಪಡಿಸಿಕೊಂಡಿದ್ದಾರೆ.
ಬೈಂದೂರು ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕರಾದ ನವೀನ್ ಬೋರ್ಕರ್ (ತನಿಖೆ) ರವರಿಗೆ ದಿನಾಂಕ:07-07-2025ರಂದು ಬೆಳಿಗ್ಗೆ ಸಮಯಕ್ಕೆ ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ ಒಂದು ಕೆಂಪು ಬಣ್ಣದ BREZZA ಕಾರಿನಲ್ಲಿ ದನವನ್ನು ಕಳವು ಮಾಡಿ ಕೊಂಡು ಹೋಗುತ್ತಿದ್ದಾರೆ ಎಂದು ಸಾರ್ವಜನಿಕ ಮಾಹಿತಿ ಬಂದಂತೆ ಬೈಂದೂರು ಒತ್ತಿನಣೆಯ ತಿರುವಿನಲ್ಲಿ ಬ್ಯಾರಿಕೇಡ್ ಹಾಕಿ ಬೈಂದೂರು ಕಡೆಯಿಂದ ಭಟ್ಕಳ ಕಡೆಗೆ ಹೋಗುತ್ತಿರುವ ವಾಹನಗಳನ್ನು ಒತ್ತಿಣೆನೆ ತಿರುವಿನಲ್ಲಿ ತಪಾಸಣೆ ಮಾಡುತ್ತಿದ್ದರು ಎನ್ನಲಾಗಿದೆ.
ಬೆಳಿಗ್ಗೆ 6:00 ಗಂಟೆ ಸಮಯಕ್ಕೆ ಬೈಂದೂರು ಕಡೆಯಿಂದ ಬಂದ ಒಂದು ಕೆಂಪು ಬಣ್ಣದ KA-47-M-8960 ನಂಬ್ರದ BREZZA ಕಾರನ್ನು ತಡೆದು ನಿಲ್ಲಿಸಿದ್ದು ಚಾಲಕ ಕಾರನ್ನು ಹಿಂದಕ್ಕೆ ರಿವರ್ಸ್ ತೆಗದುಕೊಳ್ಳಲು ಪ್ರಯತ್ನಿಸಿದ್ದು ಹಿಂದುಗಡೆ ವಾಹನ ಇದ್ದುದರಿಂದ ಹಿಂದುಗಡೆ ತೆಗೆದುಕೊಳ್ಳಲು ಅಗದೆ ಇರುವಾಗ ಕಾರನ್ನು ಅಲ್ಲಿಯೇ ಬಿಟ್ಟು ಕಾರಿನಲ್ಲಿ ಇದ್ದ ಇಬ್ಬರು ವ್ಯಕ್ತಿಗಳು ಕಾರಿನಿಂದ ಇಳಿದು ಓಡಿ ಹೋಗಿರುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕಾರಿಗೆ ಟಿಂಟ್ ಗ್ಲಾಸ್ ಅಳವಡಿಸಿದ್ದು ಪೊಲೀಸರು ಕಾರಿನ ಡಿಕ್ಕಿಯನ್ನು ಒಪನ್ ಮಾಡಿ ನೋಡಿದಾಗ ಯಾವುದೇ ಪರವಾನಿಗೆ ಪಡೆಯದೇ ಕಾರಿನ ಡಿಕ್ಕಿಯಲ್ಲಿ ನಾಲ್ಕು ದನಗಳ ಕಾಲು ಕಟ್ಟಿ ಹಿಂಸಾತ್ಮಕ ರೀತಿಯಲ್ಲಿ ಒಂದರ ಮೇಲೆ ಒಂದನ್ನು ಹಾಕಿ ಎಲ್ಲಿಂದಲೋ ಮಾಂಸ ಮಾಡುವ ಉದ್ದೇಶದಿಂದ ಕಳವು ಮಾಡಿಕೊಂಡು ಸಾಗಾಟ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಕಲಂ: 303(2) BNS 4,5,7,12 karnataka prevention of cow slanghter & cattle prevention Act 2020 Prevention of cruelty to Animals Act 1960, ಕಲಂ: 11,(1)(D) Sec 66 ಜೊತೆಗೆ 192 (A) Imv Act and CMV Rule 100(2) R/w 177 imv Act ರಂತೆ ಪ್ರಕರಣ ದಾಖಲಾಗಿದೆ.