Spread the love

ಕೋಟ : ದಿನಾಂಕ 08/07/2025 (ಹಾಯ್ ಉಡುಪಿ ನ್ಯೂಸ್) ಹರ್ಕಾಡಿ ಗ್ರಾಮದ ಗಾವಳಿ ಬ್ರಹ್ಮ ಸ್ಥಾನದ ಬಳಿಯ ಹಾಡಿಯಲ್ಲಿ  ನಡೆಯುತ್ತಿದ್ದ ಕೋಳಿ ಅಂಕ ಜುಗಾರಿ ಅಡ್ಡೆಗೆ ಕೋಟ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ರಾಘವೇಂದ್ರ ಸಿ ಅವರು ದಾಳಿ ನಡೆಸಿ 9 ಜನರನ್ನು ಬಂಧಿಸಿದ್ದಾರೆ.

ಕೋಟ ಪೊಲೀಸ್ ಠಾಣೆ ಪೊಲೀಸ್ ಉಪನಿರೀಕ್ಷಕರಾದ ರಾಘವೇಂದ್ರ  ಸಿ ಅವರು ದಿನಾಂಕ:06-07-2025 ರಂದು ಠಾಣೆಯಲ್ಲಿರುವಾಗ ಕುಂದಾಪುರ ತಾಲೂಕು ಹಳ್ಳಾಡಿ ಹರ್ಕಾಡಿ ಗ್ರಾಮದ ಗಾವಳಿ ಬ್ರಹ್ಮಸ್ಥಾನದ ಬಳಿಯ ಹಾಡಿಯಲ್ಲಿ ಕೋಳಿಗಳನ್ನು ಹಿಂಸಾತ್ಮಕವಾಗಿ ಅವುಗಳ ಕಾಲಿಗೆ ಕತ್ತಿಯನ್ನು ಕಟ್ಟಿ,ಮನೋರಂಜನೆ ಹಾಗೂ ಹಣವನ್ನು ಪಣವಾಗಿ ಕಟ್ಟಿ ಜೂಜಾಟಕ್ಕಾಗಿ ಕೋಳಿ ಅಂಕ ಆಟ ಆಡುತ್ತಿರುವ ಬಗ್ಗೆ ಸಾರ್ವಜನಿಕ ಮಾಹಿತಿ ಬಂದಂತೆ ಕೂಡಲೇ ದಾಳಿ ನಡೆಸಿದ್ದಾರೆ .

ಪೊಲೀಸರು ದಾಳಿ ನಡೆಸಿದಾಗ ಅಲ್ಲಿದ್ದವರು ಕೋಳಿಗಳನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾರೆ ಎನ್ನಲಾಗಿದೆ. ಓಡಿ ಹೋಗುತ್ತಿದ್ದವರ ಪೈಕಿ 1.ಮಂಜುನಾಥ , 2. ವಿನಯ ಕುಮಾರ,3. ಗುರುರಾಜ, 4. ವಿಶ್ವನಾಥ ಬಿ, 5. ಸುರೇಶ, 6.ಚಂದ್ರ, 7. ಅಣ್ಣಪ್ಪ, 8. ಪ್ರದೀಪ, 9. ಪ್ರಿತೇಶ್‌ ಇವರನ್ನು ಹಿಡಿದು ಬಂಧಿಸಿ ವಿಚಾರಣೆ ನಡೆಸಿದಾಗ  ಅವರುಗಳು ತಾವು ಗಾವಳಿ ಅವಿನಾಶ್‌ ಎಂಬಾತ ತಿಳಿಸಿದಂತೆ ಕೋಳಿ ಅಂಕಕ್ಕೆ ಬಂದು ಆಡುತ್ತಿರುವುದಾಗಿ ತಿಳಿಸಿರುತ್ತಾರೆ ಎನ್ನಲಾಗಿದೆ.

ಆರೋಪಿಗಳು ಆಟಕ್ಕೆ ಬಳಸಿದ ನಗದು ಒಟ್ಟು 31,120/- ರೂಪಾಯಿಗಳು, ಕೋಳಿ ಅಂಕಕ್ಕೆ ಬಳಸಿದ 3 ಕೋಳಿ, 2 ಕೋಳಿ ಬಾಳ್ ಗಳನ್ನು ಹಾಗೂ 4 ಮೋಟಾರ್‌ ಸೈಕಲ್‌ ಗಳನ್ನು ಪೊಲೀಸರು ಸ್ವಾಧಿನಪಡಿಸಿಕೊಂಡಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್‌ ಠಾಣೆಯಲ್ಲಿ  ಕಲಂ: 87, 93 KP Act & US 11(1)(A) Animal Cruelty Prevention Act ರಂತೆ ಪ್ರಕರಣ ದಾಖಲಾಗಿದೆ.

error: No Copying!