Spread the love

ಕಾಪು: ದಿನಾಂಕ: 01/07/2025 (ಹಾಯ್ ಉಡುಪಿ ನ್ಯೂಸ್) ಕಟಪಾಡಿ ಪೇಟೆಯಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದ  ಶೆಡ್ಡಿಗೆ ಕಾಪು ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ತೇಜಸ್ವಿ ಟಿ ಐ ಯವರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.

ಕಾಪು ಪೊಲೀಸ್‌ ಠಾಣೆಯ ಪೊಲೀಸ್‌ ಉಪನಿರೀಕ್ಷಕರಾದ ತೇಜಸ್ವಿ ಟಿ ಐ ರವರು ದಿನಾಂಕ: 01/07/2025ರಂದು ಠಾಣಾ ವ್ಯಾಪ್ತಿಯ ಪಾಂಗಾಳ, ಕಟಪಾಡಿ ಕಡೆಗಳಲ್ಲಿ ರೌಂಡ್ಸ್‌ ಕರ್ತವ್ಯದಲ್ಲಿರುವಾಗ  ಮಾಹಿತಿದಾರರಿಂದ ಕಾಪು ತಾಲೂಕು ಮೂಡಬೆಟ್ಟು ಗ್ರಾಮದ ಕಟಪಾಡಿ ಪೇಟೆಯ ವೈನ್ ಗೇಟ್‌ ಎಂಬ ಹೆಸರಿನ ಬಾರ್‌ ಪಕ್ಕದಲ್ಲಿರುವ ತೆರೆದ ಶೆಡ್‌ ನಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕಟಪಾಡಿ ಹೊರಠಾಣೆ ಎ.ಎಸ್.ಐ ದಯಾನಂದ ರವರೊಂದಿಗೆ  ಘಟನಾ ಸ್ಥಳಕ್ಕೆ ದಾಳಿ  ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಬಗ್ಗೆ ಕಾಪು ಪೊಲೀಸ್‌ ಠಾಣೆಯಲ್ಲಿ    ಕಲಂ: 32, 34 K.E Act ನಂತೆ ಪ್ರಕರಣ ದಾಖಲಾಗಿದೆ.

error: No Copying!