Spread the love

ಉಡುಪಿ: ದಿನಾಂಕ: 27-06-2025(ಹಾಯ್ ಉಡುಪಿ ನ್ಯೂಸ್) ಉಡುಪಿ ಟಿ.ಎಂ.ಎ ಪೈ ಆಸ್ಪತ್ರೆ ಬದಿಯ ರಿಕ್ಷಾ ನಿಲ್ದಾಣದಲ್ಲಿ  ಬಾಡಿಗೆ ಮಾಡಲು ಬಂದ ರಿಕ್ಷಾ ಚಾಲಕರೋರ್ವರಿಗೆ ಆ ನಿಲ್ದಾಣದ ಕೆಲವು ರಿಕ್ಷಾ ಚಾಲಕರು ಗಂಭೀರ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೊಳಗಾದ ರಿಕ್ಷಾ ಚಾಲಕ ಪೊಲೀಸರಿಗೆ ದೂರು ನೀಡಿದ್ದಾರೆ.

ಉಡುಪಿ ಕುರ್ಕಾಲು ಗ್ರಾಮದ ನಿವಾಸಿ ಪ್ರಸಾದ್ (33) ಎಂಬವರು ಉಡುಪಿ ನಗರದಲ್ಲಿ ಆಟೋರಿಕ್ಷಾ ಚಾಲನೆಯನ್ನು ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ದಿನಾಂಕ: 25/06/2025 ರಂದು ಸಂಜೆ  ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಟಿ.ಎಂ.ಎ ಪೈ ಆಸ್ಪತ್ರೆ ಬದಿಯ ರಿಕ್ಷಾ ನಿಲ್ದಾಣದಲ್ಲಿ ಸರತಿ ಸಾಲಿನಲ್ಲಿ ಅವರ ಆಟೋ ರಿಕ್ಷಾವನ್ನು ನಿಲ್ಲಿಸಿದ್ದ ಸಮಯ ಅಲ್ಲಿಗೆ ರಿಕ್ಷಾದಲ್ಲಿ ಬಂದ ರಘುನಂದನ್‌, ಚಂದ್ರ, ಪಣಿಶೇಖರ್‌, ರವಿ, ವಿಠಲ ಹಾಗೂ ಇತರರು ಪ್ರಸಾದ್ ರವರಲ್ಲಿ ಆಟೋರಿಕ್ಷಾ ನಿಲ್ದಾಣದಲ್ಲಿ ಐದು ಆಟೋಗಳಿಂದ ಜಾಸ್ತಿ ಆಟೋ ನಿಲ್ಲಿಸುವಂತಿಲ್ಲ ಎಂದು ಹೇಳಿದಕ್ಕೆ ಪ್ರಸಾದ್ ರವರು ಯಾವುದೇ ರಿಕ್ಷಾ ನಿಲ್ದಾಣದಲ್ಲಿ ಯಾರಾದರೂ ಪರ್ಮಿಟ್‌ ರಿಕ್ಷಾವನ್ನು ನಿಲ್ಲಿಸಬಹುದಾಗಿದೆ ಎಂದು ಹೇಳಿದಕ್ಕೆ ರಘುನಂದನ್‌ ಈ ಕಾನೂನು ನಮ್ಮ ಬಳಿ ನಡೆಯುವುದಿಲ್ಲ ಎಂದು ಹೇಳಿ ಏಕಾಏಕಿ ಕಾಲಿನಿಂದ ಎದೆಗೆ ಒದ್ದಿದ್ದು, ಪ್ರಸಾದ್ ರವರು ತಪ್ಪಿಸಿಕೊಳ್ಳಲು ಮುಂದಾದಾಗ ಆರೋಪಿತರು ಅಡ್ಡಗಟ್ಟಿದ್ದು, ಅಲ್ಲದೇ ಪಣಿಶೇಖರ್‌ ಎಂಬಾತನು ಸ್ಕ್ರೂ ಡ್ರೈವರ್‌ ನಿಂದ ಪ್ರಸಾದ್ ರವರಿಗೆ ಚುಚ್ಚಲು ಬಂದಾಗ ಪ್ರಸಾದ್ ತಪ್ಪಿಸಿಕೊಂಡಿದ್ದು, ಈ ವೇಳೆ ರಘುನಂದನ್‌ ಎಂಬಾತನು ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಸಾದ್ ರವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ  ಕಲಂ: 189(2),191(2),126(2),115(2),351(2),190 BNS ರಂತೆ ಪ್ರಕರಣ ದಾಖಲಾಗಿದೆ.

ಉಡುಪಿ ನಗರದ ರಿಕ್ಷಾ ನಿಲ್ದಾಣಗಳಲ್ಲಿ ದಿನನಿತ್ಯ ರಿಕ್ಷಾ ಚಾಲಕ ರ ನಡುವೆ ರಿಕ್ಷಾ ನಿಲ್ದಾಣಗಳಲ್ಲಿ ಪಾರ್ಕಿಂಗ್ ವಿಷಯದಲ್ಲಿ ಗಲಾಟೆ, ಹೊಡೆದಾಟ ನಡೆಯುತ್ತಿದ್ದ ರೂ ಉಡುಪಿ ನಗರಾಡಳಿತ, ಜನಪ್ರತಿನಿಧಿಗಳು, ಪೊಲೀಸ್ ಇಲಾಖೆ ಇದಕ್ಕೊಂದು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ. ಇವರುಗಳ ವೈಫಲ್ಯ ದಿಂದಾಗಿ ಬಡ ರಿಕ್ಷಾ ಚಾಲಕರು ಹೊಟ್ಟೆ ಪಾಡಿಗಾಗಿ ರಸ್ತೆಯಲ್ಲಿ ಹೊಡೆದಾಡಿ ಕೊಳ್ಳುವಂತಹ ದುಸ್ಥಿತಿ ನಿರ್ಮಾಣ ವಾಗಿದೆ. ಇನ್ನು ಮುಂದಕ್ಕೆ ಹೊಡೆದಾಡಿ ಕೊಂಡು ಯಾರದ್ದಾದರೂ ಪ್ರಾಣ ಹೋಗುವ ಮೊದಲು ಜಿಲ್ಲಾಧಿಕಾರಿ ಗಳಾದರೂ ಎಚ್ಚೆತ್ತು ಕೊಂಡು ಉಡುಪಿ ನಗರದ ರಿಕ್ಷಾ ನಿಲ್ದಾಣಗಳನ್ನು ಎಲ್ಲಾ ರಿಕ್ಷಾ ಚಾಲಕರಿಗೂ ದುಡಿಯಲು ಮುಕ್ತ ವಾಗಿಸುವ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

error: No Copying!