Spread the love

ಬೈಂದೂರು: ದಿನಾಂಕ:25-06-2025(ಹಾಯ್ ಉಡುಪಿ ನ್ಯೂಸ್) ಪಂಚಾಯತ್ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಕೆಲಸ ಮಾಡಿ ಕೊಂಡಿರುವ ನೇತ್ರಾವತಿ ಎಂಬವರಿಗೆ ನಾಗರತ್ನ ಎಂಬವರು ಬೈದು, ಗಲಾಟೆ ನಡೆಸಿ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಯರುಕೋಣೆ ನಿವಾಸಿ ನೇತ್ರಾವತಿ (33) ಎಂಬವರು ಹೇರೂರು ಕಾಲ್ತೋಡು ಮತ್ತು ಕಂಬದಕೋಣೆ ಗ್ರಾಮ ಪಂಚಾಯತ್‌ನಲ್ಲಿ ಜಂಟಿಯಾಗಿ ನಿರ್ವಹಿಸುವ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಘಟಕದಲ್ಲಿ ನೇತ್ರಾವತಿ ಅವರೊಂದಿಗೆ ಆರೋಪಿತೆ ನಾಗರತ್ನ ಎಂಬವರು ಕೂಡಾ ಕೆಲಸ ಮಾಡಿಕೊಂಡಿದ್ದು ದಿನಾಂಕ 02/12/2024 ರಂದು  ನೇತ್ರಾವತಿ ರವರು ಕಾಲ್ತೋಡು ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ತನ್ನ ಸಹೋದ್ಯೋಗಿಗಳೊಂದಿಗೆ ಊಟ ಮಾಡುತ್ತಿರುವಾಗ ಆಪಾದಿತೆ ನಾಗರತ್ನ ಗಲಾಟೆ ಮಾಡಿದ್ದಲ್ಲದೇ ದಿನಾಂಕ 17/01/2025 ರಂದು  ಅವಾಚ್ಯವಾಗಿ ಬೈದು ಬೆದರಿಕೆ ಹಾಕಿದ್ದಲ್ಲದೇ ಪಂಚಾಯತ್‌ ಪಿ.ಡಿ.ಓ ರವರು ಈ ಬಗ್ಗೆ ಪಂಚಾಯತಿ ನಡೆಸಿ ಅಪಾದಿತೆಗೆ ತಿಳುವಳಿಕೆ ನೀಡಿದರೂ ಕೂಡಾ ದಿನಾಂಕ 24/06/2025 ರಂದು ಕೂಡಾ ನೇತ್ರಾವತಿ ರವರಿಗೆ ಬೈದು ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ನೇತ್ರಾವತಿ ಅವರು ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆಯಲ್ಲಿ  ಕಲಂ: 352, 351 (2) BNS, ಮತ್ತು ಕಲಂ: 3(1) (r)(s) 3 (2 V A) SC ST (POA) Act ರಂತೆ ಪ್ರಕರಣ ದಾಖಲಾಗಿದೆ.

error: No Copying!