Spread the love

ದಿನಾಂಕ:25-06-2025 (ಹಾಯ್ ಉಡುಪಿ ನ್ಯೂಸ್)

ಬಿಜೆಪಿಯಿಂದ ಯಾವ ಪುರುಷಾರ್ಥಕ್ಕಾಗಿ ಪುರಸಭಾ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿವೆ ನಿಮ್ಮ ಪುರಸಭಾ ಅಧ್ಯಕ್ಷರೇ ಕಾನೂನುಬಾಹಿರ ಚಟುವಟಿಕೆಯಲ್ಲಿ ರಾಜಕೀಯ ಪ್ರಭಾವ ಬಳಸಿ ನಕಲಿ ದಾಖಲೆ ಸೃಷ್ಟಿಸುವಲ್ಲಿ ಭಾಗಿಯಾಗಿರುತ್ತಾರೆ.

ಶಾಸಕರೇ ಸಂಸದರೇ ನಿಮ್ಮ ನೇತ್ರತ್ವದಲ್ಲಿ ನಡೆಯುವ ಈ ಧರಣಿ ಸತ್ಯಾಗ್ರಹ ಪುರಸಭಾ ಕಚೇರಿ ಎದುರು ಯಾತಕ್ಕಾಗಿ? ತಾವುಗಳು ಆಯ್ಕೆ ಮಾಡಿದಂತಹ ಪುರಸಭಾ ಅಧ್ಯಕ್ಷರಾದ ಕೆ ಮೋಹನ್ ದಾಸ್ ಶೆಣೈ ಇವರು ಪುರಸಭಾ ಸದಸ್ಯತ್ವ ದುರುಪಯೋಗ ಪಡಿಸಿಕೊಂಡು ರಾಜಕೀಯ ಪ್ರಭಾವ ಬಳಸಿ ನಕಲಿ ನಿರಾಕ್ಷೇಪಣಾ ಪತ್ರ ದಾಖಲೆ ಸೃಷ್ಟಿಸಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ಭಾಗಿಯಾಗಿರುತ್ತಾರೆ ದಾಖಲೆ ಸಮೇತ ನಿಮ್ಮ ಮುಂದೆ ಇಟ್ಟಿರುತ್ತೇನೆ ದಯಮಾಡಿ ತಾವುಗಳು ಕುಂದಾಪುರ ಪುರಸಭೆ ವ್ಯಾಪ್ತಿಯ ಜನರಿಗೆ ಈ ದಾಖಲೆ ಬಗ್ಗೆ ಸ್ಪಷ್ಟೀಕರಣ ನೀಡಬೇಕಾಗಿ ಕೇಳಿಕೊಳ್ಳುತ್ತೇನೆ. ಎಂದು ಸ್ವಸ್ತಿಕ್ ಶೆಟ್ಟಿ, ಎನ್ ಎಸ್ ಯು ಐ, ಜಿಲ್ಲಾ ಉಪಾಧ್ಯಕ್ಷರು, ಸುಜನ್ ಶೆಟ್ಟಿ, ಎನ್ ಎಸ್ ಯು ಐ ಕುಂದಾಪುರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರು, ಸುಮುಖ ಶೇರಿಗಾರ್, ಎನ್ ಎಸ್ ಯು ಐ ಕುಂದಾಪುರ ತಾಲೂಕು ಉಪಾಧ್ಯಕ್ಷರು ಹೇಳಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: No Copying!