
ಕಾರ್ಕಳ: ದಿನಾಂಕ:24-06-2025(ಹಾಯ್ ಉಡುಪಿ ನ್ಯೂಸ್) ಕುಡಿದ ಅಮಲಿನಲ್ಲಿ ಜಗಳ ಮಾಡಿದ ಯುವಕರೀರ್ವರು ಆ ನಂತರ ತಂಡ ಕಟ್ಟಿಕೊಂಡು ಬಂದು ಯುವಕನೋರ್ವನಿಗೆ ಹಲ್ಲೆ ನಡೆಸಲು ಮುಂದಾದ ಘಟನೆ ರಂಗನಪಲ್ಕೆಯ ಬಳಿ ನಡೆದಿದೆ.
ಕಾರ್ಕಳ ತಾಲೂಕು ,ಕೌಡೂರು ಗ್ರಾಮದ ನಿವಾಸಿ ಚರಣ್ (22) ಎಂಬವರು ದಿನಾಂಕ: 21.06.2025 ರಂದು ರಾತ್ರಿ ಬೈಲೂರು ಪಳ್ಳಿ ಕ್ರಾಸ್ ಬಳಿ ಇರುವ ಸೂಪರ್ ಮಾರ್ಕೆಟ್ ಬಳಿ ನಿಂತುಕೊಂಡಿರುವಾಗ, ಆಪಾದಿತರಾದ ಅಶ್ವಿನ್ ಮತ್ತು ವಿಷ್ಣು ಎಂಬವರು ಕುಡಿದುಕೊಂಡು ಬಂದು ಚರಣ್ ರವರ ಜೊತೆ ಜೋರಾಗಿ ಮಾತನಾಡಿ ಹೋಗಿದ್ದರು ಎಂದು ಪೋಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ದಿನಾಂಕ : 22.06.2025 ರಂದು ಬೆಳಿಗ್ಗೆ ಪಂಚನಬೆಟ್ಟು ಎಂಬಲ್ಲಿ ಕೆಲಸ ಮಾಡುತ್ತಿರುವಾಗ, ಆಪಾದಿತ ಅಶ್ವಿನ್ ಎಂಬಾತನು ಪದೇ ಪದೇ ಪೋನ್ ಮಾಡುತ್ತಿದ್ದು, ನಂತರ ಮದ್ಯಾಹ್ನ ಆಪಾದಿತ ಅಶ್ವಿನ್ ಎಂಬಾತನು ಚರಣ್ ರವರಿಗೆ ಪೋನ್ ಮಾಡಿ, ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ಜಾತಿ ನಿಂದನೆ ಮಾಡಿರುತ್ತಾನೆ ಎಂದಿದ್ದಾರೆ. ಸಂಜೆ ಚರಣ್ ರವರಿಗೆ ಆಪಾದಿತ ಅಶ್ವಿನ್ ಎಂಬವನು ಆತನ ಮೊಬೈಲ್‌ನಿಂದ ವಿಷ್ಣು ಮತ್ತು ಮಂಜುನಾಥ ಎಂಬವರೊಂದಿಗೆ ಸೇರಿಕೊಂಡು ನೀನು ಜೋಡುರಸ್ತೆಗೆ ಬರುವಂತೆ ಹೇಳಿದಾಗ, ತಾನು ಬರುವುದಿಲ್ಲ, ರಂಗನಪಲ್ಕೆ ಎಂಬಲ್ಲಿಗೆ ಬರುವಂತೆ ತಿಳಿಸಿದ್ದು, ಚರಣ್ ರವರು, ಅವರ ಚಿಕ್ಕಪ್ಪ ಜಗನ್ನಾಥ್, ಸುಂದರ್, ಕಿರಣ್, ರವಿ ಮತ್ತು ಕಿರಣ್ ಎಂಬವರೊಂದಿಗೆ ರಾತ್ರಿ ಸಮಯ ಸುಮಾರು 7.45 ಗಂಟೆಗೆ ರಂಗಪಲ್ಕೆಯ ಕೀರ್ತಿ ಬಾರ್‌ನ ಪಕ್ಕದ ರಸ್ತೆಯಲ್ಲಿ ನಿಂತುಕೊಂಡಿರುವಾಗ, ಆಪಾದಿತರಾದ ಬೈಲೂರಿನ ಸುಜಿತ್, ವಿಷ್ಣು, ಅಶ್ವಿನ್, ಮಂಜುನಾಥ ಜಾರ್ಕಳ, ಯಶವಂತ್ ಹಾಗೂ ಇನ್ನೊಬ್ಬ ವ್ಯಕ್ತಿಯು ಮೋಟಾರ್ ಸೈಕಲ್‌ನಲ್ಲಿ ಬಂದು ಅಕ್ರಮ ಕೂಟ ಸೇರಿಕೊಂಡು ಆಪಾದಿತ ವಿಷ್ಣು ಎಂಬಾತನು ಚರಣ್ ರವರಿಗೆ ತಲವಾರಿನಿಂದ ಹೊಡೆಯಲು ಬಂದಿದ್ದು, ಜಗನ್ನಾಥ್ ಮತ್ತು ಸುಂದರ್ ರವರು ತಡೆಯಲು ಹೋದಾಗ, ವಿಷ್ಣು ಎಂಬಾತನು ಜಗನ್ನಾಥ್‌ರವರಿಗೆ ಮುಖಕ್ಕೆ ಕೈಯಿಂದ ಹೊಡೆದ ಪರಿಣಾಮ ಎಡಬದಿಯ ಹಲ್ಲು ಮುರಿದಿದ್ದು, ಆಪಾದಿತರಾದ ಸುಜಿತ್ ಮತ್ತು ವಿಷ್ಣು ರವರು ಸುಂದರ್ ರವರಿಗೆ ಕೈಯಿಂದ ಎದೆಗೆ ಹೊಡೆದಿರುತ್ತಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಕಲಂ 189(2),191(2), 191(3), 115(1), 118(1), 352, 351(2) r/w 190 BNS and 3(1)(r)(s),3(2)(v-a) SC/ST (POA) Act ನಂತೆ ಪ್ರಕರಣ ದಾಖಲಾಗಿದೆ.