
ಕುಂದಾಪುರ: ದಿನಾಂಕ :23-06-2025 (ಹಾಯ್ ಉಡುಪಿ ನ್ಯೂಸ್) ರೈಲ್ವೇ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ತನ್ನ ಪತಿ ಮ್ರತ ಪಟ್ಟಿರುವುದಾಗಿ ಮ್ರತ ರೈಲ್ವೇ ಟ್ರ್ಯಾಕ್ ಮ್ಯಾನ್ ಅವರ ಪತ್ನಿ ನ್ಯಾಯಕ್ಕಾಗಿ ಪೊಲೀಸರಿಗೆ ದೂರು ನೀಡಿದ್ದಾರೆ.
ಬೈಂದೂರು,ಉಪ್ಪುಂದ ಗ್ರಾಮದ ನಿವಾಸಿ ನಾಗಶ್ರೀ (41) ಅವರ ಗಂಡ ಆನಂದ (43) ಅವರು ಎಂಪ್ಲಾಯಿ ನಂಬರ್ 6793 ರಂತೆ ಕೊಂಕಣ್ ರೈಲ್ವೆ ಇಲಾಖೆಯಲ್ಲಿ ಟ್ರ್ಯಾಕ್‌ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದರು ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ನಾಗಶ್ರೀ ಅವರು ತಿಳಿಸಿದ್ದಾರೆ.
ದಿನಾಂಕ 31/03/2025 ರಂದು ಕರ್ತವ್ಯಕ್ಕೆ ಹೋಗಿದ್ದ ಆನಂದ ಅವರು ಕೊಂಕಣ ರೈಲ್ವೆ ಇಲಾಖೆಯ ಎಸ್ ಎಸ್ ಇ ವೀರೇಶರವರ ಆದೇಶದಂತೆ, ಕುಂದಾಪುರ ತಾಲೂಕು ಕಂದಾವರ ಗ್ರಾಮದ ಮೂಡ್ಲಕಟ್ಟೆ ಎಂಬಲ್ಲಿಗೆ, ಟ್ರ್ಯಾಕ್ ಮ್ಯಾನ್ ಕರ್ತವ್ಯ ಮಾಡಿಕೊಂಡಿದ್ದವರನ್ನು ಹೈಟ್ ಗೇಜ್ ಕರ್ತವ್ಯಕ್ಕೆ ನೇಮಿಸಿದಂತೆ ವೀರೇಶ ಹಾಗೂ ಪಿ ಡಬ್ಲ್ಯೂ ಎಸ್ ಮಹೇಶ್ ಎಂಬವರೊಂದಿಗೆ ಹೋಗಿದ್ದು, ಹೈಟ್ ಗೇಜ್ ಕೆಲಸ ನಡೆಯುತ್ತಿದ್ದ ಸ್ಥಳದಲ್ಲಿ ಕಂಬದ ಮೇಲೆ ಅಡ್ಡವಾಗಿ ಹಾಕುತ್ತಿದ್ದ ಕಬ್ಬಿಣದ ಪಟ್ಟಿ ಸರಿಯಾಗಿ ಕುಳಿತುಕೊಳ್ಳದಿದ್ದಾಗ ರೈಲ್ವೇ ಇಲಾಖೆಯ ಅಧಿಕಾರಿ ಎಸ್ ಎಸ್ ಈ ವೀರೇಶ ಹಾಗೂ ಪಿ ಡಬ್ಲ್ಯೂ ಎಸ್ ಮಹೇಶರವರು ನಾಗಶ್ರೀ ರವರ ಗಂಡ ಆನಂದರವರಿಗೆ ಬಲವಂತವಾಗಿ ಹೆದರಿಸಿ 30 ಕೆ.ಜಿ. ತೂಕದ ಜಾಕನ್ನು ಕೈಗೆ ಕೊಟ್ಟು ಲ್ಯಾಡರ್ ಮೇಲೆ ಹತ್ತಿ ನೋಡುವಂತೆ ಮೇಲಕ್ಕೆ ಹತ್ತಲು ಬೇಕಾದ ಯಾವುದೇ ಸುರಕ್ಷಾ ಸಾಧನಗಳನ್ನು ನೀಡದೆ, ನಿರ್ಲಕ್ಷವಾಗಿ ಹೈಟ್ ಗೇಜ್ ಹತ್ತುವಂತೆ ತಿಳಿಸಿದ್ದು, ಅವರು ಆದೇಶಿಸಿದಂತೆ ನಾಗಶ್ರೀ ರವರ ಗಂಡ ಆನಂದರವರು ಮೇಲಕ್ಕೆ ಹತ್ತಿ ಹೈಟ್‌ಗೇಜನ್ನು ಪರಿಶೀಲಿಸುತ್ತಿರುವಾಗ, ಇಲ್ಲವೇ ಹೈಟ್‌ಗೇಜ್ ಕಾಮಗಾರಿಗೆ ಬಳಸುವ ಉಪಕರಣ ಅವರ ತಲೆಗೆ ಹೊಡೆದು, ದಿನಾಂಕ 31/03/2025 ರಂದು ಮಧ್ಯಾಹ್ನ ಮೇಲಿನಿಂದ ಕೆಳಗೆ ಬಿದ್ದು ತಲೆಗೆ ತೀವೃತರವಾದ ಪೆಟ್ಟಾಗಿದ್ದವರನ್ನು ಚಿಕಿತ್ಸೆ ಬಗ್ಗೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಯಲ್ಲಿದ್ದ ನಾಗಶ್ರೀ ರವರ ಗಂಡ ಆನಂದ ಚಿಕಿತ್ಸೆಯಲ್ಲಿರುತ್ತಾ ಫಲಕಾರಿಯಾಗದೇ ದಿನಾಂಕ 02/04/2025 ರಂದು ಮಧ್ಯಾಹ್ನ ಮೃತಪಟ್ಟಿದ್ದು ನಾಗಶ್ರೀ ರವರ ಗಂಡ ಟ್ರ್ಯಾಕ್ ಮ್ಯಾನ್ ಕರ್ತವ್ಯ ಮಾಡಿಕೊಂಡಿದ್ದವರಿಗೆ ಹೈಟ್ ಗೇಜ್ ಕರ್ತವ್ಯಕ್ಕೆ ನೇಮಿಸಿ ಸುಮಾರು 30 ಕೆ.ಜಿ. ತೂಕದ ಜಾಕನ್ನು ಕೈಗೆ ಕೊಟ್ಟು ನಿರ್ಲಕ್ಷವಾಗಿ ಯಾವುದೇ ಸುರಕ್ಷಾ ಸಾಧನವನ್ನು ನೀಡದೆ ಹೈಟ್‌ಗೇಜ್ ಹತ್ತಿಸಿದ ಪರಿಣಾಮ ಮೇಲಿಂದ ಕೆಳಗೆ ಬಿದ್ದು ತೀವೃ ಗಾಯಗೊಂಡು ಮೃತಪಡಲು ಕಾರಣರಾದ ಕೊಂಕಣ ರೈಲ್ವೆ ಇಲಾಖೆಯ ಅಧಿಕಾರಿ, ಎಸ್.ಎಸ್.ಇ. ವೀರೇಶ್ ಹಾಗೂ ಪಿ ಡಬ್ಲ್ಯೂ ಎಸ್ ಮಹೇಶ ಮತ್ತು ಕಾಂಟ್ರಾಕ್ಟರ್ ರೋನಾಲ್ಡ್ ಸಿಕ್ವೇರಾ ಮತ್ತು ಕೊಂಕಣ ರೈಲ್ವೆ ಇಲಾಖೆಯ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಾಗಶ್ರೀ ರವರು ಪೊಲೀಸರಿಗೆ ದೂರು ನೀಡಿದ್ದಾರೆ.
ಅವರು ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 106, 3 (5) BNS ರಂತೆ ಪ್ರಕರಣ ದಾಖಲಾಗಿದೆ.