
ಗುಜರಾತ್: ದಿನಾಂಕ:12-06-2025(ಹಾಯ್ ಉಡುಪಿ ನ್ಯೂಸ್) ಅಹಮದಾಬಾದ್ ವಿಮಾನ ನಿಲ್ದಾಣ ದಿಂದ ಟೇಕಾಫ್ ಆದ ಕೆಲವೇ ಕ್ಷಣದಲ್ಲಿ 242 ಜನ ಪ್ರಯಾಣಿಕರಿದ್ದ ಏರ್ ಇಂಡಿಯಾ ವಿಮಾನ ತಾಂತ್ರಿಕ ದೋಷದಿಂದ ಅಹಮದಾಬಾದ್ ನ ಮೇಘಾನಿ ನಗರದ ಮೆಡಿಕಲ್ ಕಾಲೇಜು ಹಾಸ್ಟೆಲ್ ಕಟ್ಟಡವೊಂದರ ಮೇಲೆ ಬಿದ್ದು ಪತನವಾಗಿದೆ..
ಅಹಮದಾಬಾದ್ ನಿಂದ ಲಂಡನ್ ಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ A1-171 ವಿಮಾನ ಮಧ್ಯಾಹ್ನ ತಡವಾಗಿ ಯೇ ಅಂದರೆ ಮಧ್ಯಾಹ್ನ 1.38ಕ್ಕೆ ಅಹಮದಾಬಾದ್ ವಿಮಾನ ನಿಲ್ದಾಣ ದಿಂದ ಟೇಕಾಫ್ ಆಗಿ ಅಹಮದಾಬಾದ್ ಏರ್ ಪೋರ್ಟ್ ನ ಎರಡು ಕಿಲೋ ಮೀಟರ್ ಅಂತರದಲ್ಲಿ ಯೇ ಎಟಿಸಿಯಿಂದ ಸಂಪರ್ಕ ಕಳೆದು ಕೊಂಡು ವಿಮಾನ ಮೆಡಿಕಲ್ ಕಾಲೇಜು ಕಟ್ಟಡವೊಂದರ ಮೇಲೆ ಬಿದ್ದು ಸಂಪೂರ್ಣ ಭಸ್ಮ ವಾಗಿದೆ.
ಮೆಡಿಕಲ್ ಕಾಲೇಜು ಒಂದರ ಹಾಸ್ಟೆಲ್ ಕಟ್ಟಡದ ಮೇಲೆ ಬಿದ್ದು ಪತನವಾದ ಕಾರಣ ವಿಮಾನದಲ್ಲಿದ್ದ 242 ಪ್ರಯಾಣಿಕರು ಸೇರಿದಂತೆ ಹಾಸ್ಟೆಲ್ ಕಟ್ಟಡದಲ್ಲಿದ್ದ 20ಕ್ಕೂ ಹೆಚ್ಚಿನ ವೈದ್ಯಕೀಯ ವಿದ್ಯಾರ್ಥಿಗಳೂ ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ . ಭಾರತದಲ್ಲಿ ಇದುವರೆಗೆ ನಡೆದ ವಿಮಾನ ಯಾನ ದುರಂತ ಗಳಲ್ಲೇ ಇದು ಎರಡನೇ ಅತಿ ದೊಡ್ಡ ಘೋರ ದುರಂತ ಎನ್ನಲಾಗಿದೆ.
.



