Spread the love

ಉಡುಪಿ:  ದಿನಾಂಕ:27-05-2025(ಹಾಯ್ ಉಡುಪಿ ನ್ಯೂಸ್)  ಪ್ರೀತಿಸಿ ಮದುವೆಯಾಗಿದ್ದ ಯುವತಿಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಮಂಗಳೂರು ನಿವಾಸಿ ಪೂರ್ಣಿಮಾ (31) ಎಂಬವರು 9 ವರ್ಷದ ಹಿಂದೆ ಅರುಣ್ ಎಂಬವರನ್ನು ಪ್ರೀತಿಸಿ ಮದುವೆಯಾಗಿದ್ದು, ವಿವಾಹ ನೊಂದಣಿ ಆಗಿರುತ್ತದೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಹೀಗಿರುವಾಗ್ಗೆ ಪೂರ್ಣಿಮಾರವರು ತನ್ನ ಗಂಡನೊಂದಿಗೆ ಮೂಡುಬೆಳ್ಳೆ  ತಿರ್ಲಪಲ್ಕೆ ಯಲ್ಲಿರುವಾಗ ಆಪಾದಿತರುಗಳಾದ ದಿಶಾ, ನಿಶಾ, ಅನಿಲ್, ಯಶೋದರ ಮತ್ತು ದೀಕ್ಷಿತ್ ಎಂಬವರು ಪೋನ್ ಮಾಡಿ ಪೂರ್ಣಿಮಾರವರ ಗಂಡನಿಗೆ ಬೈದು ನಂತರ ಪೂರ್ಣಿಮಾರವರಿಗೂ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ ಆಪಾದಿತರು ಜೀವ ಬೆದರಿಕೆಯನ್ನು ಹಾಕಿರುತ್ತಾರೆ ಎಂದು ದೂರಿದ್ದಾರೆ.

ಇದರಿಂದ ಹೆದರಿ ಪೂರ್ಣಿಮಾರವರು ತನ್ನ ತಾಯಿ ಮನೆಯಲ್ಲಿ ವಾಸಮಾಡಿಕೊಂಡಿರುತ್ತಾರೆ ಎಂದಿದ್ದಾರೆ. ದಿನಾಂಕ 20/12/2024 ರಂದು ಪೂರ್ಣಿಮಾರವರು ತನ್ನ ಗಂಡನ ಮನೆಯಾದ ಮೂಡುಬೆಳ್ಳೆ ತಿರ್ಲಪಲ್ಕೆಯಲ್ಲಿ ಒಬ್ಬಳೇ ಇರುವಾಗ ಆರೋಪಿತರು ಬಾಗಿಲು ಬಡಿದು ಹೆದರಿಸಿದ್ದು ಪೂರ್ಣಿಮಾರವರು ಕೂಗಿಕೊಂಡಾಗ ಆರೋಪಿತರುಗಳು ಓಡಿಹೋಗಿರುತ್ತಾರೆ ಎಂದಿದ್ದಾರೆ.

ತದನಂತರವೂ ಪೋನ್‌ ನಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಪದೇ ಪದೇ ಹೆದರಿಸಿರುವುದಾಗಿ ನೀಡಿದ ದೂರಿನಂತೆ ಉಡುಪಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ Zero FIR ನಂಬ್ರ 001/2025 ಕಲಂ: 352, 351(2), 329(3) ಬಿ. ಎನ್.ಎಸ್ ಮತ್ತು ಕಲಂ: 3(1)(r)(s) ,3(2)(v-a) SC/ST (POA) ಕಾಯ್ದೆ ಯಂತೆ ಪ್ರಕರಣ ದಾಖಲಾಗಿದೆ.

error: No Copying!