
ಕಾಪು: ದಿನಾಂಕ : 21-05-2025(ಹಾಯ್ ಉಡುಪಿ ನ್ಯೂಸ್) ಕಟಪಾಡಿ ಪಳ್ಳಿಗುಡ್ಡೆ ಪಂಚಮಿ ಜನರಲ್ ಸ್ಟೋರ್ ಮತ್ತು ಪಾನ್ ಸ್ಟಾಲ್ ಬಳಿಯ ಮರದ ಕೆಳಗೆ ಮಟ್ಕಾ ಜುಗಾರಿ ದಂಧೆ ನಡೆಸುತ್ತಿದ್ದ ಯುವಕನನ್ನು ಕಾಪು ಪೊಲಿಸರು ಬಂಧಿಸಿದ್ದಾರೆ.
ಕಾಪು ಪೊಲೀಸ್ ಠಾಣೆಯ ಎ.ಎಸ್.ಐ ಯವರಾದ ದಯಾನಂದರವರಿಗೆ ದಿನಾಂಕ: 20-05-2025 ರಂದು ಬಂದ ಖಚಿತ ಮಾಹಿತಿಯಂತೆ ಏಣಗುಡ್ಡೆ ಗ್ರಾಮದ ಕಟಪಾಡಿ ಪಳ್ಳಿಗುಡ್ಡೆ ಪಂಚಮಿ ಬಾರ್ ಹತ್ತಿರದ ದಕ್ಷಿಣ ಬದಿ ಇರುವ ಪಂಚಮಿ ಜನರಲ್ ಸ್ಟೋರ್ ಮತ್ತು ಪಾನ್ ಸ್ಟಾಲ್ ಹೆಸರಿನ ಅಂಗಡಿಯ ದಕ್ಷಿಣ ಬದಿಯ ಹಲಸಿನ ಮರದ ಕೆಳಗೆ ಮಟ್ಕಾ ಜುಗಾರಿ ದಂಧೆ ನಡೆಯುತ್ತಿದೆ ಎಂದು ಮಾಹಿತಿ ಬಂದಂತೆ ಠಾಣೆಯ ಸಿಬ್ಬಂದಿಗಳೊಂದಿಗೆ ಕೂಡಲೇ ಧಾಳಿ ನಡೆಸಿದ್ದು, ಅಲ್ಲಿ ಹಣ ಕಟ್ಟಲು ಸೇರಿದ್ದ ಸಾರ್ವಜನಿಕರು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಓಡಿ ಹೋಗಿದ್ದು ಮಟ್ಕಾ ಚೀಟಿ ಬರೆಯುತ್ತಿದ್ದ ವ್ಯಕ್ತಿಯನ್ನು ಸುತ್ತುವರಿದು ಆತನ ಹೆಸರು ವಿಳಾಸ ವಿಚಾರಿಸಿದಾಗ, ಪ್ರಮೋದ್, (25) ಅಂಬಾಗಿಲು, ಪುತ್ತೂರು ಎಂದು ತಿಳಿಸಿರುತ್ತಾನೆ ಎನ್ನಲಾಗಿದೆ.
ಆತನಲ್ಲಿ ವಿಚಾರಿಸಿದಾಗ ತಾನು ಹೆಬ್ರಿಯ ದಯಾನಂದ ಎಂಬವರ ಪರವಾಗಿ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಂದ ಹಣ ಸಂಗ್ರಹಿಸಿದ್ದು ಹೀಗೆ ಸಂಗ್ರಹಸಿದ ಹಣವನ್ನು ತಾವಿಬ್ಬರೂ ಹಂಚಿಕೊಳ್ಳುತ್ತೇವೆ ಎಂದು ತಿಳಿಸಿರುತ್ತಾನೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಆತನ ಅಂಗ ಜಪ್ತಿ ಮಾಡಿದಾಗ ಆತನಲ್ಲಿದ್ದ ಒಂದು ನೋಟ್ ಪುಸ್ತಕ, ಮಟ್ಕಾ ನಂಬ್ರ ಬರೆದ ಚೀಟಿ-1 ಮತ್ತು ಮಟ್ಕಾ ನಂಬ್ರ ಬರೆಯಲು ಬಳಸಿದ್ದ ಬಾಲ್ ಪೆನ್ -1 ಹಾಗೂ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಂದ ಸಂಗ್ರಹಿಸಿದ ಒಟ್ಟು 1780/- ರೂಪಾಯನ್ನು ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಕಲಂ: 112 BNS ಮತ್ತು 78 (i)(iii) KP Act ರಂತೆ ಪ್ರಕರಣ ದಾಖಲಾಗಿದೆ.