
ಪಡುಬಿದ್ರಿ: ದಿನಾಂಕ :20/05/2025 (ಹಾಯ್ ಉಡುಪಿ ನ್ಯೂಸ್) ಪಲಿಮಾರು ಜಂಕ್ಷನ್ ಬಳಿಯ ಶೇಂದಿ ಅಂಗಡಿಯ ಒಳಗೆ ಮಟ್ಕಾ ಜುಗಾರಿ ನಡೆಸುತ್ತಿದ್ದ ವ್ಯಕ್ತಿಯನ್ನು ಪಡುಬಿದ್ರಿ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರಾದ (ಕಾ.ಸು & ಸಂಚಾರ) ಸಕ್ತಿವೇಲು ಅವರು ಬಂಧಿಸಿದ್ದಾರೆ.
ಪಡುಬಿದ್ರಿ ಪೊಲೀಸ್ ಠಾಣೆ ಪೊಲೀಸ್ ಉಪ ನಿರೀಕ್ಷಕರಾದ ಸಕ್ತಿವೇಲು ಅವರಿಗೆ ದಿನಾಂಕ: 19-05-2025 ರಂದು ಪಲಿಮಾರು ಗ್ರಾಮದ ಪಲಿಮಾರು ಜಂಕ್ಷನ್ ಬಳಿ ಇರುವ ಶೇಂದಿ ಅಂಗಡಿಯ ಒಳಗೆ ಆರೋಪಿಗಳು ಸಂಘಟಿತರಾಗಿ ಹಣವನ್ನು ಪಣಕ್ಕಿಟ್ಟು ಓ.ಸಿ (ಮಟ್ಕಾ) ಆಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯಂತೆ ಕೂಡಲೇ ದಾಳಿ ನಡೆಸಿ ಶೇಂದಿ ಅಂಗಡಿಯ ಒಳಗೆ ಸಂಘಟಿತರಾಗಿ ಮಟ್ಕಾ ಜುಗಾರಿ ಆಡಿಸುತ್ತಿದ್ದ ಆರೋಪಿ ಸಂತೋಷ್ (53) ಎಂಬಾತನನ್ನು ಬಂಧಿಸಿ ವಶಕ್ಕೆ ಪಡೆದುಕೊಂಡಿದ್ದಾರೆ .
ಆತನಿಂದ ಮಟ್ಕಾ ಜುಗಾರಿ ಆಟ ಆಡಲು ಬಳಸಿದ ಕಾಗದದ ತುಂಡುಗಳು, ಹಾಳೆ, ಬಾಲ್‌ಪೆನ್ನು, ನಗದು ರೂಪಾಯಿ 1,410/- ಸ್ವಾಧೀನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಕಲಂ: 112 ಬಿ ಎನ್ ಎಸ್ ಮತ್ತು ಕಲಂ 78(3) ಕೆ ಪಿ ಆಕ್ಟ್ ರಂತೆ ಪ್ರಕರಣ ದಾಖಲಾಗಿದೆ.