
ಪಹಲ್ಗಾಮ್ ನಲ್ಲಿ ಭಾರತದ ಪ್ರವಾಸಿಗರನ್ನು ಗುರಿಯಾಗಿಸಿ ಕೊಲೆ ಮಾಡಿದಂತ ಪಾಕ್ ಭಯೋತ್ಪಾದಕರನ್ನು ಸದೆ ಬಡಿದ ಆಪರೇಷನ್ ಸಿಂಧೂರ ಯಶಸ್ವಿಯಾಗಿ ಪಾಕಿಸ್ತಾನದ ದುಷ್ಕರ್ಮಿಗಳನ್ನು ನಾಶ ಮಾಡಿ ಅವರ ಬಂಕರ್ ಗಳನ್ನು ಹೊಡೆದುರುಳಿಸಿ ಪಾಕಿಸ್ತಾನವನ್ನೇ ನಡುಗಿಸಿದ ನಮ್ಮ ಭಾರತೀಯ ಸೈನ್ಯಕ್ಕೆ ದೊಡ್ಡ ಸೆಲ್ಯೂಟ್. ಇಡೀ ಭಾರತ ದೇಶವೇ ಭಾರತೀಯ ಸೇನೆಯ ಜೊತೆಗಿದ್ದು ಪಾಕಿಸ್ತಾನವನ್ನು ಅಲ್ಲಿನ ಭಯೋತ್ಪಾದಕ ಕೃತ್ಯವನ್ನು ಅಡಗಿಸಲು ಮುನ್ನುಗ್ಗಿದಂತಹ ಭಾರತೀಯ ಸೇನೆಯ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿರುವಾಗ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾತನ್ನು ಕೇಳಿ ಮಾನ್ಯ ಮೋದಿಯವರು ಪಾಕಿಸ್ತಾನದ ವಿರುದ್ಧ ಕದನ ವಿರಾಮ ಘೋಷಿಸಿದ್ದು ಎಷ್ಟು ಸರಿ ? ಭಾರತೀಯ ಸೇನೆಯ ಎಲ್ಲಾ ಅಧಿಕಾರಿಗಳನ್ನು ಹಾಗೂ ಸರ್ವ ಪಕ್ಷ ಸಭೆ ಕರೆದು ಕದನ ವಿರಾಮ ಘೋಷಿಸುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸ ಬಹುದಿತ್ತು ಆದರೆ ಏಕಾಏಕಿಯಾಗಿ ಈ ತೀರ್ಮಾನ ಕೈಗೊಂಡಿರುವುದು ಸರಿಯಲ್ಲ .ಅಷ್ಟು ಮಾತ್ರವಲ್ಲದೆ ಪಾಕಿಸ್ತಾನವನ್ನು ಕೂಡ ಶಕ್ತಿಶಾಲಿ ರಾಷ್ಟ್ರವೆಂದು ಅಮೆರಿಕದ ಅಧ್ಯಕ್ಷರು ಹೇಳುತ್ತಿದ್ದಾರೆಂದರೆ ಇಂಥವರ ಮಾತನ್ನು ಕೇಳುವ ಅಗತ್ಯತೆ ನಮ್ಮ ದೇಶಕ್ಕೆ ಇತ್ತೆ .ಎಂಬುದನ್ನು ಪ್ರಶ್ನಿಸಬೇಕಾಗಿದೆ. ಇಡೀ ಪಾಕಿಸ್ತಾನವನ್ನು ನಡುಗಿಸಿ ಅಲ್ಲಿನ ಭಯೋತ್ಪಾದಕರ ಹುಟ್ಟಡಗಿಸಿದ ನಮ್ಮ ಭಾರತ ದೇಶದ ಸೈನಿಕರಿಗೆ ಅಭಿನಂದನೆಗಳು. ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆ ಇದರ ಅಧ್ಯಕ್ಷರಾದ ಶ್ರೀ ಸುರೇಶ್ ಶೆಟ್ಟಿ ಬನ್ನಂಜೆ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.