Spread the love

ಗಂಗೊಳ್ಳಿ: ದಿನಾಂಕ :19-05-2025(ಹಾಯ್ ಉಡುಪಿ ನ್ಯೂಸ್) ಮರವಂತೆ ಮೀನುಗಾರ ಸಹಕಾರಿ ಸಂಘದ ಈ ಹಿಂದಿನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿದ್ದ ಪ್ರಶಾಂತಿ ಎಂಬವರು 12.5 ಲಕ್ಷ ರೂಪಾಯಿ ಸಂಘಕ್ಕೆ ವಂಚನೆ ಮಾಡಿದ್ದಾರೆ ಎಂದು ಗಂಗಾಧರ ಎಂಬವರು ಪೊಲೀಸರಿಗೆ ದೂರು ನೀಡಿದ್ದಾರೆ.

ಮರವಂತೆ ಗ್ರಾಮದ ನೊಂದಾಯಿತ ಹಣಕಾಸು ಸಂಸ್ಥೆಯಾದ ಮರವಂತೆ ಮೀನುಗಾರರ ಸಹಕಾರ ಸಂಘ ನಿ ದಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಗಂಗಾಧರ (31) ಅವರು ದಿನಾಂಕ: 01-01-2020 ರಿಂದ ಕೆಲಸ ಮಾಡಿಕೊಂಡಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಹಿಂದೆ 2013-14 ರಿಂದ 2018-19 ರವರೆಗೆ ಸದ್ರಿ ಸಂಸ್ಥೆಯಲ್ಲಿ ಪ್ರಶಾಂತಿ ಎಮ್‌ ಎಂಬವರು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕೆಲಸ ಮಾಡಿಕೊಂಡಿರುವ ಸಮಯ ಸಂಘಕ್ಕೆ ಮೋಸ ಮಾಡುವ ಮತ್ತು ನಷ್ಟ ಉಂಟು ಮಾಡುವ ಉದ್ದೇಶದಿಂದ  ಸಂಸ್ಥೆಯ 12,42,175/- ರೂಪಾಯಿ ಅನ್ನು ದುರುಪಯೋಗ ಮಾಡಿಕೊಂಡಿದ್ದು, ಈ ಬಗ್ಗೆ ಸಹಕಾರ ಸಂಘಗಳ ಸಹಾಯಕ ನಿಬಂಧಕರು ಕುಂದಾಪುರ ಉಪವಿಭಾಗ ಕುಂದಾಪುರ ನ್ಯಾಯಾಲಯವು ಪ್ರಶಾಂತಿ ಅವರಿಗೆ ಹಣ ಮರುಪಾವತಿ ಮಾಡುವಂತೆ ತೀರ್ಪು ನೀಡಿದರೂ ಸಹ ಹಣವನ್ನು ಮರುಪಾವತಿ ಮಾಡದೇ ಸಂಸ್ಥೆಗೆ ವಂಚನೆ ಮಾಡಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಬಗ್ಗೆ ಗಂಗಾಧರ ಅವರು ನೀಡಿದ ದೂರಿನಂತೆ ಗಂಗೊಳ್ಳಿ ಪೊಲೀಸ್‌ ಠಾಣೆಯಲ್ಲಿ ಕಲಂ: 408,417,418 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

error: No Copying!